೧೬೨ ಪ್ಯಾಕೆಟ್ ಮದ್ಯ ಸಹಿತ ಓರ್ವ ಸೆರೆ

0
23

ಮವ್ವಾರು: ಅಂಗಡಿಯ ಹಿಂಭಾಗದಲ್ಲಿ ಅಡಗಿಸಿಡಲಾಗಿದ್ದ ೧೬೨ ಪ್ಯಾಕೆಟ್ ಕರ್ನಾಟಕ ನಿರ್ಮಿತ ಮದ್ಯವನ್ನು ಬದಿಯಡ್ಕ ಎಸ್‌ಐ ವಿನೋದ್ ಕುಮಾರ್ ನೇತೃತ್ವದ ಪೊಲೀಸರು ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಬಂಧಿಸಲಾಗಿದೆ. ನೆಲ್ಲಿಕುಂಜೆ ನಿವಾಸಿ ಆನಂದನ್ (೪೫) ಬಂಧಿತ ಆರೋಪಿ. ಈತ ಮವ್ವಾರು ಪರಿಸರದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆಂಬ ರಹಸ್ಯ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು. ಪೊಲೀಸ್ ಅಧಿಕಾರಿಗಳಾದ ಜಯಪ್ರಕಾಶ್, ನಿರಂಜನ, ದಿಲೀಪ್, ಮಹೇಶ್ ಎಂಬವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

NO COMMENTS

LEAVE A REPLY