ಐಎನ್‌ಎಲ್‌ನಲ್ಲಿ ಮತ್ತೆ ತಲೆದೋರಿದ ಬಿಕ್ಕಟ್ಟು

0
25

ಕಾಸರಗೋಡು: ಇಂಡಿಯನ್ ನ್ಯಾಶನಲ್ ಲೀಗ್ (ಐಎನ್‌ಎಲ್)ನಲ್ಲಿ ಮತ್ತೆ ಬಿಕ್ಕಟ್ಟು ತಲೆದೋರಿದೆಯೆಂದು ತಿಳಿದು ಬಂದಿದೆ. ಭಿನ್ನ ಮತದ ಹಿನ್ನೆಲೆಯಲ್ಲಿ ದೂರಾದವರನ್ನು ಪಕ್ಷಕ್ಕೆ ಸೇರಿಸಲು ಪ್ರಯತ್ನ ನಡೆಯುತ್ತಿರುವಂ ತೆಯೇ, ಅಂತವರನ್ನು ನ್ಯಾಶನಲ್ ಸೆಕ್ಯೂಲರ್ ಕಾಂಗ್ರೆಸ್ ಎಂಬ ಪಕ್ಷಕ್ಕೆ ಸೇರಿಸುವ ತೆರೆಮರೆಯ ಯತ್ನವೂ ನಡೆಯುತ್ತಿದೆಯೆಂದು ತಿಳಿದು ಬಂದಿದೆ. ಐಎನ್‌ಎಲ್‌ನಿಂದ ವಜಾಗೈಯ್ಯ ಲ್ಪಟ್ಟವರೂ, ಹಿರಿಯ ನೇತಾರರೂ ಇದೀಗ ನ್ಯಾಶನಲ್ ಸೆಕ್ಯುಲರ್ ಕಾಂಗ್ರೆಸ್ ಪಕ್ಷವನ್ನು ಸಕ್ರಿಯಗೊಳಿಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಈ ಹಿಂದೆ ನ್ಯಾಶನಲ್ ಸೆಕ್ಯುಲರ್ ಕಾಂಗ್ರೆಸ್‌ನಲ್ಲಿದ್ದು ಅನಂತರ ಐಎನ್‌ಎಲ್‌ಗೆ ಸೇರಿ ಇದೀಗ ವಜಾಗೈಯ್ಯಲ್ಪಟ್ಟ ಮಂದಿಯೇ ಹಳೆಯ ಪಕ್ಷವನ್ನು ಸಕ್ರಿಯಗೊಳಿಸಲು ಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ.

೨೦೧೮ರಲ್ಲಿ ಶಾಸಕ ಪಿಟಿಎಂ ರಹೀಂ ಅವರ ನೇತೃತ್ವದ ನ್ಯಾಶನಲ್ ಸೆಕ್ಯೂಲರ್ ಕಾಂಗ್ರೆಸ್ ನ್ಯಾಶನಲ್ ಲೀಗ್ ಜತೆ ಸೇರಿತ್ತು. ಆದರೆ ಈ ಮಂದಿಯನ್ನು ಹಲವು ಹಂತಗಳಲ್ಲಿ ಅನಂತರ ನ್ಯಾಶನಲ್ ಲೀಗ್‌ನಿಂದ ವಜಾಗೈಯ್ಯಲಾಗಿತ್ತು.

NO COMMENTS

LEAVE A REPLY