ಆಟೋ ಚಾಲಕನಿಗೆ ಒಲಿದ ಓಣಂ ಬಂಪರ್

0
51

ಕೊಚ್ಚಿ: ಕೇರಳ ರಾಜ್ಯ ಲಾಟರಿ ತಿರುವೋಣಂ ಬಂಪರ್ ಪ್ರಥಮ ಬಹುಮಾನ ಪಡೆದ ಭಾಗ್ಯಶಾಲಿಯನ್ನು ಕೊನೆಗೂ ಪತ್ತೆಹಚ್ಚಲಾಗಿದೆ. ಕೊಚ್ಚಿಯ ಮರಡ್ ನಿವಾಸಿ ಆಟೋ ಚಾಲಕ ಪಿ.ಆರ್. ಜಯಪಾಲನ್ (೫೬) ೧೨ ಕೋಟಿಯ ಒಡೆಯನಾಗಿದ್ದಾರೆ. ಟಿ.ವಿ. ಮೂಲಕ ಲಾಟರಿಯ ಫಲಿತಾಂಶ ವೀಕ್ಷಿಸಿದ ಜಯಪಾಲನ್ ತನಗೆ ೧೨ ಕೋಟಿ ರೂ.ಲಭಿಸಿದೆಯೆಂದು ತಿಳಿದು ರಹಸ್ಯವಾಗಿ ಟಿಕೆಟ್‌ನ್ನು ಮರಡ್  ಕೆನರಾ ಬ್ಯಾಂಕ್‌ನಲ್ಲಿ ಹಾಜರುಪಡಿಸಿದ್ದಾರೆ. ಇದರ ವ್ಯವಹಾರಗಳು ಮುಗಿದ ನಂತರ ಜಯಪಾಲನ್ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.

ಮರಡ್‌ನಲ್ಲಿ ಆಟೋ ಚಾಲಕನಾಗಿರುವ ಜಯಪಾಲನ್ ಈ ಹಿಂದೆಯೇ ಲಾಟರಿಪ್ರಿಯರಾಗಿದ್ದಾರೆ. ತನಗೆ ಅಮಿತ ಸಾಲವಿದ್ದು, ಲಾಟರಿ ಬಹುಮಾನದ ಹಣದಿಂದ ಸಾಲತೀರಿಸುವುದಾಗಿ ಜಯಪಾಲನ್ ಹೇಳಿದ್ದಾರೆ. ಅದೇ ರೀತಿ ಮಕ್ಕಳಿಗೆ ಮನೆ ನಿರ್ಮಿಸಿ ಕೊಡಬೇಕೆಂದು ಅವರು ಹೇಳಿದ್ದಾರೆ.  ಓಣಂ ಬಂಪರ್ ತನಗೆ ಲಭಿಸಿದೆಯೆಂದು ಓರ್ವ ಅನಿವಾಸಿ ನಿನ್ನೆ ಪ್ರಚಾರಮಾಡಿದ್ದನು.

NO COMMENTS

LEAVE A REPLY