ಹೈಟೆಕ್ ಆಗಲಿರುವ ರಾಜ್ಯದ ಕೋಳಿ ಅಂಗಡಿಗಳು

0
40

ಕಾಸರಗೋಡು: ರಾಜ್ಯದ ಕೋಳಿ ಅಂಗಡಿಗಳು ಇನ್ನು ಮುಂದೆ ಹೈಟೆಕ್ ಆಗಲಿದೆ. ಇವರಿಗಿರುವ ಮಾರ್ಗರೇಖೆ ಸ್ಥಳೀಯಾಡಳಿತೆ ಸಚಿವಾಲಯ ಸಿದ್ಧಪ ಡಿಸಿದೆ. ಕೋಳಿಗಳನ್ನು ಇರಿಸುವುದು, ಮಾಂಸ ಮಾಡುವುದು, ತ್ಯಾಜ್ಯ ವಿಲೇ ವಾರಿ ಎಂಬಿವು ನೂತನ ಮಾರ್ಗರೇಖೆ ಯನ್ನು ಅನುಸರಿಸಿ ನಡೆಯಲಿದೆ.

ತ್ಯಾಜ್ಯ ಸಂಗ್ರಹ, ಸಾಗಾಟ, ಸಂಸ್ಕರಣೆ ಎಂಬಿವುಗಳಿಗೆ ರಾಜ್ಯ ಮಲಿನೀಕರಣ ನಿಯಂತ್ರಣ ಬೋರ್ಡ್ ಮಾರ್ಗರೇಖೆ ಬಿಡುಗಡೆಗೊಳ್ಳಲಿದೆ. ಅದರಂತೆ ಕೋಳಿ ಮಾಂಸದ ತ್ಯಾಜ್ಯಗಳ ಸಂಗ್ರಹ, ಸಾಗಾಟ ಎಂಬಿವು ನಡೆಯಲಿದೆ.

ಕೋಳಿ ಅಂಗಡಿಗಳಲ್ಲಿ ಕೋಳಿ ಗಳನ್ನು ಕೊಲ್ಲುವುದು, ಮಾಂಸ ಮಾಡು ವುದು ಎಂಬಿವುಗಳಿಗೆ ಪ್ರತ್ಯೇಕ ಸೌಕರ್ಯ ವಿರುವುದು. ನೊಣಗಳು ಇದರ ಒಳಗೆ ಪ್ರವೇಶಿಸದಂತೆ ಬಲೆ ಹಾಕಲಾಗುವುದು. ಮರದ ತುಂಡಿನಲ್ಲಿ ಮಾಂಸ ಮಾಡು ವುದಕ್ಕೆ ಅವಕಾಶವಿಲ್ಲ. ಇದರ ನೌಕರರಿಗೆ ಪ್ರತೀ ತಿಂಗಳು ಖಡ್ಡಾಯ ಆರೋಗ್ಯ ತಪಾಸಣೆ ಮಾಡಲಾಗುವುದು. ಕೋಳಿ ಅಂಗಡಿಗಳಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆಯಿರುವುದು. ಮಲಿನಜಲ ಸಂಗ್ರಹಿಸಲು ಪ್ರತ್ಯೇಕ ಟ್ಯಾಂಕ್ ಇರಿಸಲಾಗುವುದು. ಪ್ರತಿ ದಿನವೂ ಸ್ಟಾಕ್ ರಿಜಿಸ್ಟರ್ ಇರಬೇಕು. ಕೋಳಿ ಅಂಗಡಿಯ ನೆಲ, ಗೋಡೆಗೆ ಟೈಲ್ಸ್ ಅಳವಡಿಸಬೇಕು. ಆಹಾರ ಸುರಕ್ಷಾ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡಬೇಕು. ಇಲಾಖೆಯ ಅನುಮತಿ ಇದ್ದರೆ ಮಾತ್ರ ಹೋಟೆಲ್ ಗಳಿಗೆ ಮಾಂಸ ಮಾರಾಟ ಮಾಡ ಬಹುದು. ರಾಜ್ಯದಲ್ಲಿ ಕೋಳಿ ಅಂಗಡಿ ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಯಾವುದೇ ಅನುಮತಿ, ಮುಂಜಾಗ್ರತೆ ಇಲ್ಲದೆಯೇ ಈ ಕೋಳಿ ಅಂಗಡಿಗಳು ಆರಂಭವಾಗುತ್ತಿವೆ. ಇದರಿಂದಾಗಿ ವಿವಿಧೆಡೆ ರೋಗ ಹರಡುವ ಭೀತಿಯಿದೆ. ಈ ಹಿನ್ನೆಲೆಯಲ್ಲಿ ಕೋಳಿ ಅಂಗಡಿಗಳಿಗೆ ನಿಯಂತ್ರಣ ಏರ್ಪಡಿಸಲು ನಿರ್ಧರಿಸಲಾಗಿದೆ.

NO COMMENTS

LEAVE A REPLY