ನಾಪತ್ತೆಯಾದ ಗೃಹಿಣಿ ಹಾಗೂ ಮೀನು ವ್ಯಾಪಾರಿ ಕಲ್ಲಿಕೋಟೆಯಲ್ಲಿ ಪತ್ತೆ

0
58

ಕಣ್ಣೂರು: ಕಳೆದ ೨೬ರಂದು ಕಣ್ಣೂರಿನಿಂದ ನಾಪತ್ತೆಯಾದ ಗೃಹಿಣಿ ಹಾಗೂ ಮೀನು ವ್ಯಾಪಾರಿಯನ್ನು ಕಲ್ಲಿಕೋಟೆಯಿಂದ ಬಂಧಿಸಲಾಗಿದೆ. ಪಯ್ಯನ್ನೂರು, ಕೂಟೇರಿ ನಿವಾಸಿ ಮಹೇಶ್‌ರ ಪತ್ನಿ ದಿವ್ಯ (೩೩), ಈಕೆಯ ಪ್ರಿಯಕರ ಮೀನು ವ್ಯಾಪಾರಿ ಹಾರಿಸ್ (೪೦) ಎಂಬವರು ಇಂದು ಬೆಳಿಗ್ಗೆ ಕಲ್ಲಿಕೋಟೆಯಲ್ಲಿ ಇವರು ವಾಸಿಸುವ ಮನೆ ಸುತ್ತುವರಿದು ಪೊಲೀಸರು ಬಂಧಿಸಿದ್ದಾರೆ.ನಾಪತ್ತೆಯಾದ ದಿವ್ಯ ಕೂಟೇರಿಯಲ್ಲಿ ತರಕಾರಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಸಮೀಪದಲ್ಲಿರುವ ಮೀನು ವ್ಯಾಪಾರಿಯಾಗಿದ್ದ ಹಾರಿಸ್ ಜತೆ ಪ್ರೇಮ ಹುಟ್ಟಿಕೊಂಡಿತ್ತು. ಅದರಂತೆ ಇಬ್ಬರೂ ಪಲಾಯನಗೈದರು. ದಿವ್ಯಾಳಿಗೆ ೧೧ ವರ್ಷದ ಪುತ್ರಿಯಿದ್ದಾಳೆ.

ಪಯ್ಯನ್ನೂರು ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿದ್ದಾರೆ. ಹಾರಿಸ್ ವಿರುದ್ಧ ಯುವತಿಯನ್ನು ಅಪಹರಣಗೈದ ಕೇಸು ಹಾಗೂ ದಿವ್ಯಾ ವಿರುದ್ಧ ಪುತ್ರಿಯನ್ನು ಬಿಟ್ಟು ಪರಾರಿಯಾದ ಬಗ್ಗೆ ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY