ಥಿಯೇಟರ್ ತೆರೆಯುವ ಬಗ್ಗೆ ಸರಕಾರದ ಪರಿಗಣನೆಯಲ್ಲಿ

0
30

ತಿರುವನಂತಪುರ: ರಾಜ್ಯದಲ್ಲಿ ಕೋ ವಿಡ್ ರೋಗಿಗಳ ಸಂಖ್ಯೆಯಲ್ಲಿ   ಇಳಿಕೆ ಉಂಟಾಗಿರುವ  ಹಿನ್ನೆಲೆಯಲ್ಲಿ   ನಿಯಂ ತ್ರಣಗಳಲ್ಲಿ  ಇನ್ನಷ್ಟು ಸಡಿಲಿಕೆಗಳನ್ನು ಜ್ಯಾರಿಗೆ ತರಲು ಸರಕಾರ ಆಲೋಚಿಸುತ್ತಿದೆ. 

ಇದರಂತೆ ಥಿಯೇಟರ್ ಹಾಗೂ ಸಭಾಂಗಣಗಳನ್ನು ಶೀಘ್ರತೆರೆಯಲು  ಅನುಮತಿ ಲಭಿಸಲಿದೆಯೆಂದು ತಿಳಿದುಬಂದಿದೆ. ಥಿಯೇಟರ್‌ಗಳನ್ನು ತೆರೆಯಲು ಇದೀಗ ಅನುಕೂಲಕರ ವೆಂದು ಸಚಿವ ಸಜಿ ಚೆರಿಯಾನ್ ತಿಳಿಸಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.  ಈ ಹಿನ್ನೆಲೆಯಲ್ಲಿ ಥಿಯೇಟರ್‌ಗಳು ಹಾಗೂ ಆಡಿಟೋರಿಯಂ ತೆರೆಯಲು ಪರಿಗಣಿಸಲಾಗುವುದೆಂದೂ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಸೀರಿಯಲ್, ಸಿನಿಮಾ ಚಿತ್ರೀಕರಣಕ್ಕೆ ಅನುಮತಿಯಿದೆ. ಕಾಲೇಜು, ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆಯುತ್ತಿದೆ. ಆದ್ದರಿಂದ ಥಿಯೇಟರ್‌ಗಳನ್ನು ತೆರೆಯುವ ಬಗ್ಗೆ   ಈ ಬಗ್ಗೆ ಆರೋಗ್ಯ ತಜ್ಞರೊಂದಿಗೆ ಸಮಾಲೋಚಿಸಿದ ಬಳಿಕ ಮುಂದಿನ ಅವಲೋಕನ ಸಭೆಯಲ್ಲಿ ಅಂತಿಮ ನಿರ್ಧಾರವಾಗಲಿದೆ.

ಮೊದಲ ಹಂತದ ಕೋವಿಡ್ ಹರಡುವಿಕೆ ನಿಯಂತ್ರಣಕ್ಕೆ ಬಂದ ಬಳಿಕ ಥಿಯೇಟರ್ ಗಳನ್ನು ತೆರೆಯಲಾಗಿತ್ತು. ಆದರೆ ಎರಡನೇ ಅಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚ ವಾದುದರಿಂದ  ಮತ್ತೆ ಮುಚ್ಚುಗಡೆ ಗೊಳಿಸಬೇಕಾಗಿ ಬಂದಿತ್ತು. ಕೋವಿಡ್ ಹರಡುವಿಕೆ ಆರಂಭಗೊಂಡ ಬಳಿಕ ಥಿಯೇಟರ್ ಮಾಲಕರು ಭಾರೀ ಸಂದಿಗ್ಧತೆ ಎದುರಿಸುತ್ತಿದ್ದಾರೆ.

NO COMMENTS

LEAVE A REPLY