ರಸ್ತೆಗೆ ಓಡಿದ ಮಗುವನ್ನು ರಕ್ಷಿಸುವ ಮಧ್ಯೆ ಬಾಲಕಿ ಆಟೋ ರಿಕ್ಷಾ ಢಿಕ್ಕಿ ಹೊಡೆದು  ಮೃತ್ಯು

0
58

ಹೊಸದುರ್ಗ: ರಸ್ತೆಗೆ ಓಡಿದ ಮಗುವನ್ನು ರಕ್ಷಿಸುವ ಮಧ್ಯೆ ಬಾಲಕಿ ಆಟೋ ರಿಕ್ಷಾ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಚೆರ್ವತ್ತೂರು ಪಯ್ಯಗೆ ಮಸೀದಿ ಬಳಿಯ ಶೌಕತ್-ಸುಮಯ್ಯ ದಂಪತಿಯ ಪುತ್ರಿ ಶಹನ (೮) ಮೃತಪಟ್ಟ ಬಾಲಕಿಯಾಗಿದ್ದಾಳೆ. ನಿನ್ನೆ ಸಂಜೆ ೪ ಗಂಟೆಗೆ ಘಟನೆ ನಡೆದಿದೆ.

ಮನೆಯಿಂದ ಹೊರಗೆ ಓಡಿದ ಮಗುವನ್ನು  ರಕ್ಷಿಸಲು ಶಹನ ರಸ್ತೆಗೆ ಓಡಿದಳೆನ್ನಲಾಗಿದೆ. ಈ ವೇಳೆ ಅಮಿತ ವೇಗದಿಂದ ಬಂದ ಆಟೋ ರಿಕ್ಷಾ ಶಹನಳಿಗೆ ಢಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡ ಶಹನಾಳನ್ನು ಕೂಡಲೇ ಚೆರ್ವತ್ತೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆ ವೇಳೆ ಆಕೆ ಮೃತಪಟ್ಟಿದ್ದಳು. ಕೈದಕ್ಕಾಡ್ ಎಯುಪಿ ಶಾಲೆಯ ವಿದ್ಯಾರ್ಥಿನಿಯಾದ ಶಹನ ಸಹೋದರಿ ಶಫ್ನಳನ್ನು ಅಗಲಿದ್ದಾಳೆ.

NO COMMENTS

LEAVE A REPLY