ಕೋಟ್ಟಯಂ ನಗರಸಭೆ ವಿರುದ್ಧ ಅವಿಶ್ವಾಸ ಗೊತ್ತುವಳಿ

0
28

ಕೋಟ್ಟಯಂ: ಕೋಟ್ಟಯಂ ನಗರಸಭೆಯಲ್ಲಿ ಯುಡಿಎಫ್ ಆಡಳಿತಸಮಿತಿ ವಿರುದ್ಧ ಎಲ್ ಡಿಎಫ್ ಮಂಡಿಸಿದ ಅವಿಶ್ವಾಸ ಗೊತ್ತುವಳಿ ಮೇಲೆ ಚರ್ಚೆ  ಆರಂಭಗೊಂಡಿದೆ. ಇದೇ ವೇಳೆ ಅವಿಶ್ವಾಸ ಗೊತ್ತುವಳಿಯನ್ನು ಬಿಜೆಪಿ ಬೆಂಬಲಿಸಲಿದೆಯೆಂದು ತಿಳಿದುಬಂದಿದೆ. ಬಿಜೆಪಿಯ ಎಂಟು ಮಂದಿ ಸದಸ್ಯರಿಗೆ ವಿಪ್ ನೀಡಲಾಗಿದೆ.  ಈ ಹಿಂದೆ ಅವಿಶ್ವಾಸ ಗೊತ್ತುವಳಿ ಚರ್ಚೆಯಿಂದ ದೂರವುಳಿಯಲು ಯುಡಿಎಫ್ ನಿರ್ಧರಿಸಿತ್ತು. ಡಿಸಿಸಿ ಅಧ್ಯಕ್ಷ ನೇರವಾಗಿ ಯುಡಿಎಫ್ ಸದಸ್ಯರಿಗೆ ವಿಪ್ ನೀಡಿದ್ದಾರೆ.  ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯ ತೀವ್ರಗೊಂಡ ಹಿನ್ನೆಲೆಯಲ್ಲಿ  ಪಕ್ಷ ಈ ನಿರ್ಧಾರಕ್ಕೆ ಬಂದಿದೆ. ಆಡಳಿತ ಸ್ತಂಭನೆ ಉಂಟಾಗಿದೆಯೆಂದು ಆರೋಪಿಸಿ ಎಲ್‌ಡಿಎಫ್  ಅವಿಶ್ವಾಸ ಗೊತ್ತು ವಳಿಗೆ ನೋಟೀಸು ನೀಡಿದೆ. 

NO COMMENTS

LEAVE A REPLY