ಮನೆಯಿಂದ ಅಡಿಕೆ ಕಳವು

0
63

ಬಾಯಾರು: ಮನೆಯ ಮಹಡಿ ಮೇಲಿರಿಸಿದ್ದ ಅಡಿಕೆಯನ್ನು ಕಳವು ನಡೆಸಿದ ಬಗ್ಗೆ ದೂರಲಾಗಿದೆ. ಚೇರಾಲ್‌ನ ವಿಮಲ ಎಂಬವರ ಮನೆಯಿಂದ ಅಡಿಕೆ ಕಳವುಗೈಯ್ಯ ಲಾಗಿದೆ.  ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಮೇಲಿನ ಮಹಡಿಗೆ ತೆರಳಿದ್ದು ಅಲ್ಲಿ ಐದು ಗೋಣಿ ಚೀಲಗಳಲ್ಲಿರಿಸಿದ್ದ ಅಡಿಕೆಯನ್ನು ಕಳವುಗೈದಿರುವುದಾಗಿ ದೂರಲಾಗಿದೆ. ಈ ತಿಂಗಳ ೧೪ರಂದು ಅಡಿಕೆ ಕಳವು ನಡೆ ದಿದೆಯೆಂದು ವಿಮಲ ದೂರಿದ್ದಾರೆ. ಇದೇ ವೇಳೆ ಅದೇ ದಿನ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರೂ ಪೊಲೀಸರು ನಿನ್ನೆ ಕೇಸು ದಾಖ ಲಿಸಿಕೊಂಡಿದ್ದಾರೆಂದು ಆರೋಪಿಸ ಲಾಗಿದೆ. ತನಿಖೆ ಮುಂದುವರಿಯು ತ್ತಿದೆ. ಆರೋಪಿಗಳು ಬಲೆಯಲ್ಲಿರು ವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY