ಕಾಡಾನೆ ತುಳಿತ: ಗೃಹಿಣಿ ಮೃತ್ಯು

0
35

ಇಡುಕ್ಕಿ: ಕಾಡಾನೆ ಆಕ್ರಮಣದಿಂದ ಗೃಹಿಣಿ ಮೃತಪಟ್ಟ ಘಟನೆ ನಡೆದಿದೆ. ಇಡುಕ್ಕಿ ಅವಯರಂಕಲ್ ಎಂಬಲ್ಲಿಗೆ ಸಮೀಪ ಘಟನೆ ನಡೆದಿದೆ. ಚಟ್ಟ ಮುನ್ನಾರ್ ನಿವಾಸಿ ಕುಮಾರನ್‌ರ ಪತ್ನಿ ವಿಜಿ (೩೬) ಎಂಬಿವರು ಮೃತಪಟ್ಟವರಾಗಿದ್ದಾರೆ. ವಿಜಿ ಹಾಗೂ ಕುಮಾರನ್ ಬೈಕ್‌ನಲ್ಲಿ ಪ್ರಯಾಣಿಸುತ್ತಿರುವಾಗ ರಸ್ತೆಯಲ್ಲಿದ್ದ ಕಾಡಾನೆ ಆಕ್ರಮಣ ನಡೆಸಿದೆ. ಆನೆಯ ತುಳಿತದಿಂದ ಗಾಯಗೊಂಡ ವಿಜಿ ತಕ್ಷಣ ಮೃತಪ್ಟಟಿರುವುದಾಗಿ ತಿಳಿದುಬಂದಿದೆ.

NO COMMENTS

LEAVE A REPLY