ಈ ವರ್ಷ ೬.೦೭ಲಕ್ಷ ಮಕ್ಕಳು ಶಾಲೆಗೆ

0
33

ಕಾಸರಗೋಡು: ಒಂದೂವರೆ ವರ್ಷಗಳ ಬಳಿಕ ನವಂಬರ್ ೧ರಂದು ಶಾಲೆಗಳು ತೆರೆಯುವಾಗ ಹೊಸತಾಗಿ ೬,೦೭,೭೦೨ ಮಕ್ಕಳು ಪ್ರವೇಶ ಪಡೆದಿದ್ದಾರೆ. ಒಂದನೇ ತರಗತಿ ಹೊರತು ಎರಡನೇ ತರಗತಿಯ ಮಕ್ಕಳು ಕೂಡಾ ಇದೇ ಮೊದಲ ಬಾರಿಗೆ ಶಾಲೆಗೆ ತಲುಪುವರು. ಕಳೆದ ವರ್ಷ ಒಂದನೇ ತರಗತಿಗೆ ೩,೦೨,೨೮೮ ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಈ ವರ್ಷ ೩,೦೫,೪೧೪ ಮಕ್ಕಳು ಸೇರಿದ್ದಾರೆ. ಖಾಸಗಿ ಶಾಲೆಗಳ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿದಾಗ ಹೊಸತಾಗಿ ಸೇರಿದ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗಿದೆ.  ಈ ವರ್ಷ ೧ರಿಂದ ೧೦ನೇ ತರಗತಿವರೆಗೆ ಒಟ್ಟು ೩೪,೧೦,೧೬೭ ಮಕ್ಕಳು ಶಾಲೆಗೆ ತಲುಪಲಿದ್ದಾರೆ.

NO COMMENTS

LEAVE A REPLY