ಕಾರು ತಡೆದು ನಿಲ್ಲಿಸಿ ಯುವಕನ ಅಪಹರಣ: ತನಿಖೆ ತೀವ್ರ

0
49

ಕಾಸರಗೋಡು: ಕಾರು ತಡೆದು ನಿಲ್ಲಿಸಿ ಯುವಕನನ್ನು ಅಪಹರಿಸಿದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮೊನ್ನೆ ಮಧ್ಯಾಹ್ನ ಮೊಗ್ರಾಲ್ ಪುತ್ತೂರಿನಲ್ಲಿ ಘಟನೆ ನಡೆದಿದೆ. ಕುಂಬಳೆ ಭಾಗದಿಂದ ಎರಡು ಇನೋವಾ ಕಾರುಗಳು ಅಮಿತ ವೇಗದಲ್ಲಿ ತಲುಪಿವೆ. ಮೊಗ್ರಾಲ್ ಪುತ್ತೂರಿಗೆ ತಲುಪಿದಾಗ ಹಿಂಬದಿಯಲ್ಲಿ ಬಂದ ಕಾರು ಮುಂದೆ ಚಲಿಸಿ ಮತ್ತೊಂದು ಕಾರಿಗೆ ಅಡ್ಡವಾಗಿ ನಿಂತಿದೆ. ಕೂಡಲೇ ಕಾರಿನಲ್ಲಿ ಬಂದ ತಂಡ ಮತ್ತೊಂದು ಕಾರಿನಲ್ಲಿದ್ದ ಚಾಲಕನನ್ನು ಹಿಡಿದೆಳೆದು ತಮ್ಮ ಕಾರಿಗೆ ಹತ್ತಿಸಿ ಪರಾರಿಯಾಗಿತ್ತು.

ಇದೇ ವೇಳೆ ಅಪಹರಣ ಕ್ಕೀಡಾದ ಚಾಲಕನ ಕೈಯಲ್ಲಿ ೬೪ ಲಕ್ಷ ರೂಪಾಯಿ ಇತ್ತೆಂದೂ ಅದನ್ನು ಅಪಹರಿಸುವ ಉದ್ದೇಶದಿಂದ ತಂಡ ಚಾಲಕನ ಅಪಹರಣ ನಡೆಸಿದೆ ಯೆಂದು ತಿಳಿದುಬಂದಿದೆ. ಇದೇ ವೇಳೆ ಈ ಪೈಕಿ ಒಂದು ಕಾರು ಪಯ್ಯನ್ನೂರು ಪೊಲೀಸ್  ಠಾಣೆ ವ್ಯಾಪ್ತಿಯ ಕಾಂಕೋಲ್ ಕಾರಿಂ ಕುಳಿ ಎಂಬಲ್ಲಿ ಹಾನಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

NO COMMENTS

LEAVE A REPLY