ಪುತ್ರನನ್ನು ಕುತ್ತಿಗೆ ಬಿಗಿದು ಕೊಲೆಗೈದು ತಂದೆ ಆತ್ಮಹತ್ಯೆ: ಪತ್ನಿ ಸ್ಥಿತಿ ಚಿಂತಾಜನಕ

0
70

ಕಣ್ಣೂರು: ಪುತ್ರನನ್ನು ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆಗೈದ ಬಳಿಕ ತಂದೆ ಸ್ವತಃ ಕುತ್ತಿಗೆಗೆ ಇರಿದು ಆತ್ಮಹತ್ಯೆ ಗೈದ ದಾರುಣ ಘಟನೆ ನಡೆದಿದೆ. ಪತ್ನಿ ಯನ್ನು ಕುತ್ತಿಗೆ  ಬಿಗಿದು ಕೊಲೆಗೈಯ್ಯಲು ಯತ್ನಿಸಿದ್ದ ಈಕೆಯ  ಸ್ಥಿತಿಯೂ ಗಂಭೀರ ವಾಗಿದೆಯೆಂದು ತಿಳಿದುಬಂದಿದೆ.

ಕಣ್ಣೂರು ಶ್ರೀಕಂಠಾಪುರ ಬಳಿಯ ಎರುವೇಶಿ ಮೊಯಿಪ್ರ ಪುಳ್ಳಿಮಾನ್ ಕುನ್ನು ಎಂಬಲ್ಲಿ ಇಂದು ಬೆಳಿಗ್ಗೆ ಈ ದಾರುಣ ಘಟನೆ ನಡೆದಿದೆ.  ಇಲ್ಲಿನ ಮಾವಿಲ ವೀಟಿಲ್ ನಿವಾಸಿ ಸತೀಶನ್ (೩೮), ಪುತ್ರ ಧ್ಯಾನ್‌ಚಂದ್ರ (೯ ತಿಂಗಳು) ಎಂಬಿವರು ಸಾವನ್ನಪ್ಪಿದ್ದಾರೆ.

ಸತೀಶನ್‌ರ ಪತ್ನಿ ಅಂಜು (೨೮)ವಿನ ಸ್ಥಿತಿ ಗಂಭೀರವಾಗಿದ್ದು, ಈಕೆಯನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಇಂದು ಬೆಳಿಗ್ಗೆ ೯.೩೦ರ ವೇಳೆ ಘಟನೆ ನಡೆದಿದೆ. ಪತ್ನಿ ಹಾಗೂ ಮಗುವನ್ನು ಕೊಠಡಿಯೊಳಗೆ ಕೂಡಿ ಹಾಕಿದ ಸತೀಶನ್ ಅವರಿಬ್ಬರ ಕುತ್ತಿಗೆ ಬಿಗಿದಿದ್ದಾನೆ. ಇದರಿಂದ ಉಸಿರುಗಟ್ಟಿದ ಇವರು  ಪ್ರಜ್ಞೆ ತಪ್ಪಿ ಬಿದ್ದಾಗ ಅವರು ಸಾವನ್ನಪ್ಪಿದರೆಂದು ಖಚಿತಪಡಿಸಿದ ಸತೀಶನ್ ತನ್ನ ಕುತ್ತಿಗೆಯನ್ನು ಇರಿದು ಗಾಯಗೊಳಿಸಿ ಆತ್ಮಹತ್ಯೆಗೆ ಯತ್ನಿಸಿ ದ್ದಾನೆ. ಈ ವೇಳೆ ಮನೆಯಲ್ಲಿದ್ದ ತಾಯಿ ಬೊಬ್ಬೆ ಹೊಡೆದು ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ತಲುಪಿದ ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಸತೀಶನ್ ಹಾಗೂ ಮಗು ಧ್ಯಾನ್ ಚಂದ್ರ ಆಸ್ಪತ್ರೆಗೆ ತಲುಪುವ ಮೊದಲೇ ಸಾವನ್ನಪ್ಪಿದ್ದಾರೆ.  ಅಂಜುವಿನ ಸ್ಥಿತಿ ಚಿಂತಾಜನಕವಾಗಿದೆಯೆಂದು ಆಸ್ಪತ್ರೆ ಮೂಲಗಳು  ತಿಳಿಸಿವೆ.

ಸತೀಶನ್ ಈ ಕೃತ್ಯವೆಸಗಲು ಕಾರಣವೇನೆಂದು ತಿಳಿದುಬಂದಿಲ್ಲ.

NO COMMENTS

LEAVE A REPLY