ನಾಪತ್ತೆಯಾದ ಗೃಹಿಣಿ ಪ್ರಿಯತಮನ ಜತೆ ಶರಣು

0
80

ಬದಿಯಡ್ಕ: ಇಲ್ಲಿನ ನೆಕ್ರಾಜೆಯಿಂದ ನಾಪತ್ತೆಯಾದ ಗೃಹಿಣಿ ಹಾಗೂ ಅನ್ಯ ರಾಜ್ಯ ಕಾರ್ಮಿಕ ನಿನ್ನೆ  ನ್ಯಾಯಾಲಯದಲ್ಲಿ  ಹಾಜರಾಗಿದ್ದಾರೆ. ನೆಕ್ರಾಜೆ ಬಳಿಯ ಅಬ್ಬಾಸ್‌ರ ಪತ್ನಿ ರಿಫಾನಾ (೩೩) ನಿನ್ನೆ  ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಈ ವೇಳೆ ಆಕೆ ಪತಿಯ ಜತೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದು, ಆದರೆ ಪತಿ ಆಕೆಯನ್ನು ಸ್ವೀಕರಿಸಲು ಸಿದ್ಧರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ತಾಯಿಯ  ಜತೆ ತೆರಳಿದ್ದಾಳೆ.ಈ ತಿಂಗಳ ೩೦ರಂದು  ಬೆಳಿಗ್ಗೆ  ನೆಕ್ರಾಜೆ ಬಳಿಯ ಉದ್ದಂ ಎಂಬಲ್ಲಿನ ಪತಿಯ ಮನೆಯಿಂದ ರಿಫಾನಾ ನಾಪತ್ತೆಯಾಗಿದ್ದಳು. ಈ ವೇಳೆ ಪತಿ ಅಬ್ಬಾಸ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದು,  ಪೊಲೀಸರು ನಡೆಸಿದ ತನಿಖೆಯಲ್ಲಿ ಈಕೆ ಪಾಲಕ್ಕಾಡ್‌ನಲ್ಲಿ ಇರುವುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ  ಪೊಲೀಸರು ಅತ್ತ ತೆರಳಲು  ಯೋಜನೆ ಹಾಕುತ್ತಿರುವಂತೆಯೇ ಆಕೆ  ಹಾಜರಾಗಿದ್ದು, ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY