ನಕಲಿ ಚಿನ್ನ ಅಡವಿರಿಸಿ ವಂಚನೆ: ಇನ್ನೋರ್ವ ಸೆರೆ

0
102

ಕಾಸರಗೋಡು: ಉದುಮ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿರಿಸಿ ೨.೭೪ ಕೋಟಿ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಇನ್ನೋರ್ವ ನನ್ನು ಪೊಲೀಸರು ಬಂಧಿಸಿದ್ದಾರೆ. ದೇಳಿ ನಿವಾಸಿ ಟಿ.ಎ. ಸಮೀರ್ (೩೯) ಬಂಧಿತ ಆರೋಪಿ. ಈತ ಬೇ ರೊಂದು ಪ್ರಕರಣದಲ್ಲಿ ಜೈಲಿನಲ್ಲಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂಬ್ರಾಂಚ್ ಪೊಲೀ ಸರು ಆತನನ್ನು  ಜೈಲಿನಿಂದ ಬಂಧಿಸಿದ್ದಾರೆ.  ಉದುಮ ಕಳನಾಡು ನಿವಾಸಿ ಸುಹೈಲ್‌ನ ನೇತೃತ್ವದಲ್ಲಿ ೧೩ ಮಂದಿ ಯ ತಂಡ ನಕಲಿ ಚಿನ್ನ ಅಡವಿರಿಸಿ ೨.೭೪ ಕೋಟಿ ರೂ.ಪಡೆದು ವಂಚಿಸಲಾಗಿದೆ. ಈ ಬ್ಯಾಂಕ್‌ನಲ್ಲಿ ನಡೆದ ತಪಾಸಣೆ ವೇಳೆ ನಕಲಿ ಚಿನ್ನ ಅಡವಿರಿಸಿದ ಪ್ರಕರಣ ಬಹಿರಂಗ ಗೊಂಡಿದೆ. ಈ ಹಿನ್ನೆಲೆಯಲ್ಲಿ ಸುಹೈಲ್‌ನನ್ನು ಬಂಧಿಸಲಾಗಿದೆ.

NO COMMENTS

LEAVE A REPLY