ರೈಲು ಢಿಕ್ಕಿ ಹೊಡೆದು ಮೃತಪಟ್ಟ ವ್ಯಕ್ತಿ ಗುರುತು ಪತ್ತೆ

0
103

ಕಾಸರಗೋಡು: ಅಡ್ಕತ್ತಬೈಲು ಸಮೀಪ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಪಾಂಡಿಚೇರಿ ನಿವಾಸಿಯೆಂದು ತಿಳಿದು ಬಂದಿದೆ. ಪಾಂಡಿಚೇರಿ ಏನಂ ನಿವಾಸಿ ಸತೀಬಾಬು  (೪೩) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಕೇಶವ್- ಧನಲಕ್ಷ್ಮಿ ದಂಪತಿಯ ಪುತ್ರನಾದ ಮೃತರು ಮೀನು ಕಾರ್ಮಿಕನಾಗಿದ್ದಾರೆ. ಕಳೆದ ಆದಿತ್ಯವಾರ ಇವರು ಅಡ್ಕತ್ತಬೈಲು ಬಳಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ವಿಷಯ ತಿಳಿದು ತಲುಪಿದ ಸಂಬಂಧಿಕರು  ಮೃತವ್ಯಕ್ತಿಯ ಗುರುತು ಪತ್ತೆಹಚ್ಚಿದ್ದಾರೆ.

ಮೃತರು ಪತ್ನಿ ನಾಗವಾಣಿ, ಮಕ್ಕಳಾದ ಸಾಯಿ, ಪೂಜಿತ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY