ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು

0
174

ಕುಂಬಳೆ: ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತಪಟ್ಟರು. ನಾರಾಯಣಮಂಗಲ ನಿವಾಸಿ ಕೆ. ಮೋಹನ (೪೫) ಎಂಬವರು ಮೃತಪಟ್ಟ ವ್ಯಕ್ತಿ. ಕಳೆದ ತಿಂಗಳ ೧೯ರಂದು ಇವರು ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರ್ಥಿಕ ಸಂದಿಗ್ಧತೆಯೇ ಇವರು ವಿಷ ಸೇವಿಸಲು ಕಾರಣವೆಂದು ಹೇಳಲಾಗುತ್ತಿದೆ. ನಾರಾಯಣ ಮಂಗಲದ ದಿ| ಬಾಬು- ವಸಂತಿ ದಂಪತಿಯ ಪುತ್ರನಾಗಿರುವ ಇವರು ಪತ್ನಿ ನಳಿನ, ಮಕ್ಕಳಾದ ಕಾರ್ತಿಕ್, ಕೌಶಿಕ್, ಸಹೋದರ- ಸಹೋದರಿ ಯರಾದ ದಿನೇಶ್, ಪುಷ್ಪರಾಜ್, ಉಮೇಶ್, ಗೋಪಾಲಕೃಷ್ಮ, ಪ್ರಭ, ಗೀತ, ಮಂಜುಳ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY