ದನ ಸಾಗಾಟದ ವಾಹನ ತಡೆದು ದರೋಡೆ ಆರೋಪಿ ಮೂರು ದಿನ ಪೊಲೀಸ್ ಕಸ್ಟಡಿಗೆ

0
80

ಆದೂರು: ದನ ಸಾಗಾಟದ ವಾಹನವನ್ನು ತಡೆದು ನಿಲ್ಲಿಸಿ ಕ್ಲೀನರ್‌ಗೆ ಹಲ್ಲೆಗೈದು ಹಣ ದರೋಡೆಗೈದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಶರಣಾದ ಆರೋಪಿಯನ್ನು ಪೊಲೀಸರ  ಕಸ್ಟಡಿಗೆ ಬಿಡಲಾಗಿದೆ. ದೇಲಂಪಾಡಿ ಕಲ್ಲಡ್ಕ ನಿವಾಸಿ ಸುನಿಲ್ ಕುಮಾರ್ (೨೬)ನನ್ನು ಮೂರು ದಿನಗಳ ಕಾಲ ಆದೂರು ಪೊಲೀಸರ ವಶಕ್ಕೆ ಬಿಡಲಾ ಗಿದೆ. ಕಳೆದ ಅಗೋಸ್ತ್ ೧೨ರಂದು ಘಟನೆ ನಡೆದಿತ್ತು. ಕಾರಡ್ಕ ಬ್ಲಾಕ್ ಪಂಚಾಯತ್ ವತಿಯಿಂದ ಕ್ಷೀರ ಕೃಷಿಕರಿಗೆ ವಿತರಿಸಲು ಕರ್ನಾಟಕದಿಂದ ಪಿಕಪ್ ವಾಹನದಲ್ಲಿ ದನ ಹಾಗೂ ಕರು ವನ್ನು ತರುತ್ತಿದ್ದಾಗ ಇಬ್ಬರ ತಂಡ ದೇಲಂಪಾಡಿ ಕಲ್ಲಡ್ಕದಲ್ಲಿ ಅಡ್ಡ ಗಟ್ಟಿತ್ತು. ಈ ವೇಳೆ ಕ್ಲೀನರ್ ಪಳ್ಳಂಗೋಡು ಸಿದ್ದಿಕ್ ಮೇಲೆ ಹಲ್ಲೆಗೈದ  ತಂಡ ಆತನ ಕಿಸೆಯಲ್ಲಿದ್ದ ೬,೫೦೦ ರೂ. ವಶಪಡಿಸಿ ಪರಾರಿ ಯಾಗಿತ್ತು.

NO COMMENTS

LEAVE A REPLY