ಬಿಜೆಪಿ ಜಿಲ್ಲಾಧ್ಯಕ್ಷರಾಗಿ ರವೀಶ ತಂತ್ರಿ ಕುಂಟಾರು

0
171

ಕಾಸರಗೋಡು: ಭಾರತೀಯ ಜನತಾ ಪಾರ್ಟಿ ಕಾಸರಗೋಡು ಜಿಲ್ಲಾ ಅಧ್ಯಕ್ಷರಾಗಿ ರಾಜ್ಯ ಸಮಿತಿ ಸದಸ್ಯರಾಗಿದ್ದ ಕುಂಟಾರು ರವೀಶ ತಂತ್ರಿ ಅವರನ್ನು ನೇಮಕಗೊಳಿ ಸಲಾ ಗಿದೆ. ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ಈ ಮಾಹಿತಿ ಯನ್ನು ನಿನ್ನೆ ಬಿಡುಗಡೆಗೊ ಳಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷರಾಗಿದ್ದ ಕೆ. ಶ್ರೀಕಾಂತ್‌ರನ್ನು ರಾಜ್ಯಕಾರ್ಯದರ್ಶಿಯಾಗಿ ಭಡ್ತಿ ನೀಡಲಾಗಿದೆ.

ಕಾರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟಾರು ಮನೆತನದ ಸದಸ್ಯರಾದ ರವೀಶ ತಂತ್ರಿ ಕುಂಟಾರು ಈ ಹಿಂದೆ ಹಿಂದೂ ಐಕ್ಯವೇದಿಯಲ್ಲಿ ಸಕ್ರಿಯರಾಗಿದ್ದರು. ಅನಂತರ ೨೦೧೬ರಲ್ಲಿ ಕಾಸರಗೋಡಿನಿಂದ ವಿಧಾನಸಭೆ, ೨೦೧೯ರಲ್ಲಿ ಕಾಸರಗೋಡು ಲೋಕಸಭೆ ಅದೇ ವೇಳೆ ಮಂಜೇಶ್ವರ ವಿಧಾನಸಭಾ ಉಪಚುನಾವಣೆಯಲ್ಲೂ ಸ್ಪರ್ಧಿಸಿದ್ದರು. 

ಕನ್ನಡ ವಲಯದಲ್ಲಿ ಉತ್ತಮ ಸಂ ಪರ್ಕ ಹೊಂದಿರುವ ರವೀಶ ತಂತ್ರಿಯವರು ಕರ್ನಾಟಕ ಸರಕಾರದ ಹಲವು ಸಚಿವರ,ಶಾಸಕರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.   ಇದು ಕಾಸರಗೋಡು, ಮಂಜೇಶ್ವರ ವಿಧಾನಸಭಾ ವ್ಯಾಪ್ತಿಯಲ್ಲಿ ಪಕ್ಷದ ಚಟುವಟಿಕೆಗಳಿಗೆ ಹುರುಪು ನೀಡಲು ಸಹಾಯಕವಾಗಲಿದೆಯೆಂದು ಕಾರ್ಯಕರ್ತರು ಹೇಳಿದ್ದಾರೆ. ಜತೆಗೆ ಕೆ.ಶ್ರೀಕಾಂತ್ ಅವರು ರಾಜ್ಯ ಕಾರ್ಯ ದರ್ಶಿಯಾಗಿ ಕಾಸರಗೋಡು ಜಿಲ್ಲೆಯ ಪಕ್ಷದ ಚಟುವಟಿಕೆಗಳಿಗೆ ಹೆಗಲು ನೀಡಲಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕವಾಗಿದ್ದರೂ ಉಳಿದ ಪದಾಧಿಕಾರಿಗಳ ಆಯ್ಕೆ ನಡೆದಿಲ್ಲ.

NO COMMENTS

LEAVE A REPLY