ಆದೂರು ಸಿಐಗೆ ವರ್ಗಾವಣೆ

0
65

ಮುಳ್ಳೇರಿಯ: ಆಡಳಿತ ಪಕ್ಷದ ಒತ್ತಾಸೆಗೆ ಮಣಿಯದ ಆದೂರು ಇನ್‌ಸ್ಪೆಕ್ಟರ್‌ರನ್ನು ವರ್ಗಾಯಿಸಲಾಗಿದೆ ಯೆಂದು ತಿಳಿದುಬಂದಿದೆ.  ಆದೂರು ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಮುಕುಂದನ್ ಅವರನ್ನು ಪಯ್ಯನ್ನೂರು ಕಂಟ್ರೋಲ್ ರೂಂಗೆ ವರ್ಗಾಯಿಸ ಲಾಗಿದೆ. ಆದೂರಿಗೆ  ವೆಳ್ಳರಿಕುಂಡ್ ಇನ್ ಸ್ಪೆಕ್ಟರ್ ಎ. ಅನಿಲ್ ಕುಮಾರ್ ಅವರನ್ನು ನೇಮಿಸಲಾಗಿದೆ.  ಎ. ಅನಿಲ್ ಕುಮಾರ್ ಅವರು ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸುವರು.

ಆದೂರು ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಹಲವು ಪ್ರಕರಣಗಳಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಮುಕುಂದನ್ ಅವರು ದಿಟ್ಟ ಕ್ರಮ ಕೈಗೊಂಡಿದ್ದರು. ಇದು ಆಡಳಿತ ಪಕ್ಷದ ಪ್ರಮುಖರಿಗೆ ಇರಿಸುಮುರಿಸು ತಂದಿತ್ತು.

NO COMMENTS

LEAVE A REPLY