೯೨೦ ಗ್ರಾಂ ಚಿನ್ನ ಸಹಿತ ಕಾಸರಗೋಡು ನಿವಾಸಿ ಸೆರೆ

0
58

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾ ಮೂಲಕ ೯೨೦ ಗ್ರಾಂ ಚಿನ್ನ ಸಾಗಿಸಲು ಯತ್ನಿಸಿದ ಕಾಸರಗೋಡು ನಿವಾಸಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮುಟ್ಟತ್ತೋಡಿ ನಿವಾಸಿ ಅಬ್ದುಲ್ ಅಸೀಸ್ ಬಂಧಿತ ವ್ಯಕ್ತಿಯೆನ್ನಲಾಗಿದೆ. ವಶಪಡಿಸಿದ ಚಿನ್ನಕ್ಕೆ ೪೩,೮೮,೪೦೦ ರೂಪಾಯಿ ಬೆಲೆ ಅಂದಾಜಿಸಲಾಗಿದೆ.  ನಿನ್ನೆ ಬೆಳಿಗ್ಗೆ ದುಬಾ ಯಿಯಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ತಲುಪಿದ ಅಬ್ದುಲ್ ಅಸೀಸ್‌ನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಒಳಉಡುಪಿನಲ್ಲಿ ಪ್ರತ್ಯೇಕ ತಯಾರಿಸಿದ   ಜೇಬಿನಲ್ಲಿ ಚಿನ್ನ ಬಚ್ಚಿಟ್ಟಿರುವುದು ಪತ್ತೆಯಾಗಿದೆ ಯೆಂದು ಅಧಿಕಾರಿಗಳು ತಿಳಿಸಿದ್ದಾರೆ.

NO COMMENTS

LEAVE A REPLY