ದಂಪತಿ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ

0
69

ಪಾಲಕ್ಕಾಡ್: ಪಟ್ಟಾಂಬಿ ಚಾಲಶ್ಶೇರಿ ಪೆರುಮಣ್ಣೂರ್ ಎಂಬಲ್ಲಿ ದಂಪತಿಯ ಮೃತದೇಹ ಮನೆಯೊಳಗೆ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೆರುಮಣ್ಣೂರು ವಡಕ್ಕೇಪುರಕ್ಕಲ್ ನಿವಾಸಿ ನಿವೃತ್ತ ಹೆಲ್ತ್ ಇನ್‌ಸ್ಪೆಕ್ಟರ್ ವಿ.ಪಿ. ನಾರಾಯಣನ್(೭೦), ಪತ್ನಿ ಇಂದಿರ (೬೦) ಎಂಬಿವರು ಮೃತಪಟ್ಟವರಾಗಿದ್ದಾರೆ. ದಂಪತಿ ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು. ಮೃತದೇಹ  ಸುಟ್ಟು ಕರಕಲಾಗಿದ್ದರೂ ಮನೆಗೆ ಬೆಂಕಿ ತಗಲಿದ ಕುರುಹು ಕಂಡುಬಂದಿಲ್ಲವೆನ್ನಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

NO COMMENTS

LEAVE A REPLY