ಲಖಿಂಪುರ ಪ್ರಕರಣ: ಕೇಂದ್ರ : ಸಚಿವರ ಪುತ್ರ ತನಿಖೆಗೆ ಹಾಜರು

0
70

ನವದೆಹಲಿ: ಉತ್ತರಪ್ರದೇಶದ ಲಖಿಂಪುರ್ ಖೇದಿ ಎಂಬಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರರ ಪುತ್ರ ಆಶಿಶ್  ಮಿಶ್ರ ಇಂದು ಪೊಲೀಸರ ಮುಂದೆ ತನಿಖೆಗಾಗಿ ಹಾಜರಾಗಿದ್ದಾರೆ. ಇಂದು ಬೆಳಿಗ್ಗೆ ಪೊಲೀಸ್ ಅಧಿಕಾರಿಗಳ ಮುಂದೆ ಹಾಜರಾದ ಅವರು ಮಾಧ್ಯಮಗಳ ಜತೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.  ಕೃಷಿ ಕಾಯ್ದೆಯನ್ನು ಪ್ರತಿಭಟಿಸಿ ಲಖಿಂಪುರದಲ್ಲಿ ನಡೆದ ಹೋರಾಟದ ವೇಳೆ ಕಾರು ನಿಯಂತ್ರಣ ತಪ್ಪಿ ಸಂಚರಿಸಿದ ಪರಿಣಾಮ ಕೃಷಿಕರ ಸಹಿತ ೯  ಮಂದಿ ಸಾವನ್ನಪ್ಪಿದರು. ೪ ಮಂದಿ ಕೃಷಿಕರು ಕಾರು ವೀಲ್‌ನ ನಿಯಂತ್ರಣ ತಪ್ಪಿ ಮೃತಪಟ್ಟಿದ್ದು, ಉಳಿದವರು ಅನಂತರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟರು. ಈ ಪ್ರಕರಣದಲ್ಲಿ ಓರ್ವ ಪತ್ರಕರ್ತನೂ ಮೃತಪಟ್ಟಿದ್ದಾರೆ.

ವಾಹನ ಚಲಾಯಿಸಿ ಕೃಷಿಕರು ಮೃತಪಟ್ಟಿರಬೇಕೆಂದು ಲಖಿಂಪುರ್ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಲಖಿಂಪುರ್ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಉತ್ತರಪ್ರದೇಶ ಸರಕಾರ ಆದೇಶ ನೀಡಿತ್ತು.

ನಿನ್ನೆ ಸುಪ್ರೀಂಕೋರ್ಟ್‌ನಲ್ಲಿ ಈ ವಿಷಯ ಭಾರೀ ವಾಗ್ವಾದಕ್ಕೆ ಕಾರಣವಾಗಿತ್ತು. ಕೇಂದ್ರ ಸಚಿವರ ಪುತ್ರ ತನಿಖೆಗೆ ಹಾಜರಾಗದಿರಲು ಕಾರಣವೇನೆಂದು ನ್ಯಾಯಾಲಯ ಪ್ರಶ್ನಿಸಿತ್ತು.

ಈ ಹಿನ್ನೆಲೆಯಲ್ಲಿ ಆಶಿಶ್ ಮಿಶ್ರ ಇಂದು ತನಿಖೆಗಾಗಿ ಪೊಲೀಸರ ಮುಂದೆ ಹಾಜರಾಗಿದ್ದಾರೆ.

NO COMMENTS

LEAVE A REPLY