ಮೇಯಲು ಬಿಟ್ಟ ಕರುವಿನ ಕಾಲಿನಲ್ಲಿ ಪರಚಿದ ಗಾಯ: ಸ್ಥಳೀಯರಲ್ಲಿ ಚಿರತೆ ಭೀತಿ

0
28

ಉಪ್ಪಳ: ಅಪರಿಚಿತ ಜೀವಿ ಉಪ್ಪಳ ಭಾಗದಲ್ಲಿ ಜನರ ನಿದ್ದೆಗೆಡಿಸುತ್ತಿದೆ. ಮೇಯಲು ಬಿಟ್ಟ ಕರುವಿನ ಕಾಲನ್ನು ಪ್ರಾಣಿ ಪರಚಿದ್ದು, ಇದು ಇಲ್ಲಿನವರಲ್ಲಿ ಇನ್ನಷ್ಟು ಭೀತಿ ಸೃಷ್ಟಿಸಿದೆ. ನಿನ್ನೆ ಮಧ್ಯಾಹ್ನ ಚೆರುಗೋಳಿ ಕೃಷ್ಣನಗರದಲ್ಲಿ ಘಟನೆ ನಡೆದಿದೆ. ಇಲ್ಲಿಗೆ ಸಮೀಪದ ಕಾಡು ಪೊದೆಗಳ ಮಧ್ಯೆ ಕರು ಮೇಯುತ್ತಿದ್ದಾಗ ಚಿರತೆಯನ್ನು ಹೋಲುವ ಪ್ರಾಣಿಯೊಂದು ಇಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಈ ಪ್ರಾಣಿ ಕರುವಿನ ಕಾಲಿಗೆ ಪರಚಿರುವುದಾಗಿ ಸ್ಥಳೀಯರು ಶಂಕಿಸಿದ್ದಾರೆ. ಕರುವಿನ ಕಾಲಿನಲ್ಲಾದ ಗಾಯವನ್ನು ನೋಡಿದಾಗ ಚಿರತೆ ಪರಚಿದ ರೀತಿ ಕಂಡುಬರುತ್ತಿದೆಯೆಂದು ಸ್ಥಳೀಯರು ನುಡಿಯುತ್ತಾರೆ. ಬಳಿಕ ಇಲ್ಲೆಲ್ಲಾ ಹುಡಿಕಾಡಿದರೂ ಪ್ರಾಣಿಯು ಪತ್ತೆಯಾಗಲಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಗೆ ಸ್ಥಳೀಯರು ತಿಳಿಸಿದ್ದಾರೆ.

NO COMMENTS

LEAVE A REPLY