ಮನೆಗಳಿಂದ ನಗ-ನಗದು ಕಳವು

0
37

ಹೊಸದುರ್ಗ: ಮನೆಯ ಕಿಟಿಕಿ ಸರಳುಗಳನ್ನು ಮುರಿದು ಒಳನುಗ್ಗಿದ ಕಳ್ಳರು ನಗ-ನಗದು ದೋಚಿದ್ದಾರೆ.

ಹೊಸದುರ್ಗ ಬಾರ್‌ನ ಹಿರಿಯ ನ್ಯಾಯವಾದಿ, ಲಕ್ಷ್ಮೀವೆಂಕಟೇಶ ಕ್ಷೇತ್ರ ಬಳಿಯ ನಿವಾಸಿ ಇ. ಶ್ರೀಧರನ್ ಎಂಬವರ ಮನೆಯಿಂದ ಕಳವು ನಡೆದಿದೆ.  ಕಪಾಟಿನಲ್ಲಿರಿಸಿದ್ದ ಚಿನ್ನವಿರಿಸಿದ್ದು ೨೦,೦೦೦ ರೂಪಾಯಿ ಹಾಗೂ ಚಿನ್ನದ ಎರಡು ಬೆಂ ಡೋಲೆಗಳನ್ನು ಕಳ್ಳರು ದೋಚಿದ್ದಾರೆ. ಶ್ರೀಧರನ್ ಹಾಗೂ ಕುಟುಂಬ ಕಣ್ಣೂರಿನಲ್ಲಿರುವ ಪುತ್ರಿಯ ಮನೆಗೆ ತೆರಳಿದ್ದ ವೇಳೆ ಕಳವು ನಡೆದಿದೆ.   ಕುಟುಂಬ ನಿನ್ನೆ ಸಂಜೆ ಮರಳಿ ಬಂದಾಗ ಕಳವು ನಡೆದಿರುವುದು ತಿಳಿದುಬಂದಿದೆ. ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಚೀಮೇನಿ ಕ್ಲಾಯಿಕೋಡ್‌ನಲ್ಲಿ ಮನೆಯ ಬೀಗ ಮುರಿದು ಹಣ ಹಾಗೂ ಆಭರಣ ಕಳವುಗೈದ  ಘಟನೆ ನಡೆದಿದೆ. ಚೀಮೇನಿ ಕ್ಲಾಯಿಕೋಡ್ ಪ್ರಸಾದ್‌ರ ಮನೆಯಿಂದ ೨ ಪವನ್ ಚಿನ್ನಾಭರಣ ಹಾಗೂ ೨೦ ಸಾವಿರ ರೂ. ಕಳುಗೈಯ್ಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

NO COMMENTS

LEAVE A REPLY