ಜಿಲ್ಲೆಯಲ್ಲಿ ತೀವ್ರ ಮಳೆ: ನೀರ್ಚಾಲಿನಲ್ಲಿ ಮನೆ ಕುಸಿತ

0
39

ಕಾಸರಗೋಡು: ಎಲ್ಲೋ ಅಲರ್ಟ್ ಘೋಷಿಸಿರುವ ಕಾಸರಗೋಡು ಜಿಲ್ಲೆಯ ಲ್ಲಿಯೂ ನಿನ್ನೆ ರಾತ್ರಿ ಭಾರೀ ಮಳೆ ಉಂಟಾಗಿದೆ. ಮಳೆಯಿಂದಾಗಿ ವಿವಿಧೆಡೆ ಗುಡ್ಡ ಕುಸಿತ, ಮನೆ ಕುಸಿತ ಉಂಟಾಗಿದೆ.

ನೀರ್ಚಾಲು ಬಳಿಯ ಕಿಳಿಂಗಾರು ಬೇರಿಕೆಯ ದೇವಪ್ಪ ಎಂಬವರ ಮನೆ ಇಂದು ಮುಂಜಾನೆ ಕುಸಿದುಬಿದ್ದಿದೆ. ಇಂದು ಮುಂಜಾನೆ ೨.೩೦ರ ವೇಳೆ ಶಬ್ದವುಂಟಾದಾಗ ದೇವಪ್ಪ ಹಾಗೂ ಮನೆಯವರು ಎದ್ದು ಹೊರಬಂದಿದ್ದು, ಈ ವೇಳೆ ಹೆಂಚು ಹಾಸಿದ ಮನೆ ನೆಲಕಚ್ಚಿದೆ. ಮನೆ ಕುಸಿತದಿಂದಾಗಿ ಭಾರೀ ನಾಶನಷ್ಟವುಂಟಾಗಿದೆ.

ಕೊನ್ನಕ್ಕಾಡ್ ಅಶೋಕಚಾಲ್ ಎಂಬಲ್ಲಿ ನೀರು ರಸ್ತೆಯಲ್ಲಿ ಹರಿಯ ತೊಡಗಿದ್ದು, ಇದರಿಂದಾಗಿ ವಾಹನ ಸಂಚಾರ ಮೊಟಕುಗೊಂಡಿದೆ. ಇಲ್ಲಿ ಹೊಳೆಯಿಂದ  ಜನವಾಸ ಕೇಂದ್ರಕ್ಕೆ ನೀರು ಪ್ರವೇಶಿಸಿದೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಮರ ಬಿದ್ದು ವಾಹನ ಸಂಚಾರ ಮೊಟಕುಗೊಂಡ ಘಟನೆ ನಡೆದಿದೆ.

NO COMMENTS

LEAVE A REPLY