ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ನಿಧನ

0
43

ಪಂಜಿಕಲ್ಲು: ಐದು ದಶಕಗಳ ಕಾಲ ಯಕ್ಷರಂಗವನ್ನು ಕರ್ಣಾನಂದಕರ ಗಾಯನದಿಂದ ಮೋಹಗೊಳಿಸಿದ ಪದ್ಯಾಣ ಗಣಪತಿ ಭಟ್ ಎಂಬ ಭಾಗವತ ರು ಇನ್ನಿಲ್ಲ. ಅವರಿಗೆ ೬೬ ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷದ ಹಿಂದೆ ಸಂಭವಿಸಿದ ಕಾರು ಅಪ ಘಾತದಿಂದ ಗಾಯಗೊಂಡು ಚಿಕಿತ್ಸೆ ಯಲ್ಲಿದ್ದ ಗಣಪತಿ ಭಟ್ ವಯೋಸಹಜ ರೋಗಗಳಿಂದಲೂ ಬಳಲುತ್ತಿದ್ದರು. ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು.

ತನ್ನ ೧೬ನೇ ವಯಸ್ಸಿನಲ್ಲೇ ಭಾಗ ವತರಾಗಿ ಯಕ್ಷರಂಗಕ್ಕೆ ಕಾಲಿಟ್ಟ ಇವರು ಪದ್ಯಾಣ ಶೈಲಿ ಎಂಬ ಹೊಸತೊಂದು  ಗಾಯನಕ್ಕೆ ನಾಂದಿ ಹಾಡಿದ್ದರು. ಇತ್ತೀಚೆಗಿನವರೆಗೂ ಹನುಮಗಿರಿ ಮೇಳದಲ್ಲಿ ಭಾಗವತರಾಗಿದ್ದರು. ಯಕ್ಷಗಾನದಲ್ಲಿ ಹೊಸ ರಾಗಗಳನ್ನು ಅಳವಡಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡ ಇವರು ಕುಂಡಾವು, ಚೌಡೇಶ್ವರಿ, ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಹೊಸನಗರ ಮೇಳಗಳಲ್ಲಿ ಸೇವೆ ಗೈದಿದ್ದರು.

ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಲಭಿಸಿತ್ತು. ದುಬೈ, ಮಸ್ಕತ್, ಕುವೈಟ್ ಸಹಿತ ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದರು. ದಿಲ್ಲಿ, ಮುಂಬೈ, ಕಾಸರಗೋಡು, ಶಿವಮೊಗ್ಗ ಮಂಗಳೂರು ಸೇರಿದಂತೆ ದೇಶದಾದ್ಯಂತ ಸನ್ಮಾನ ಸ್ವೀಕರಿಸಿದ್ದಾರೆ.

ಸುಳ್ಯ ತಾಲೂಕಿನ ಕಲ್ಮಡ್ಕದ ಸಮೀಪದ ಗೋಳ್ತಜೆಯಲ್ಲಿ ಪದ್ಯಾಣ ತಿರುಮಲೇಶ್ವರ ಭಟ್, ಸಾವಿತ್ರಿ ಅಮ್ಮ ದಂಪತಿ ಪುತ್ರನಾಗಿ ಜನಿಸಿದ ಇವರು ಪತ್ನಿ ಶೀಲಾ ಶಂಕರಿ, ಮಕ್ಕಳಾದ ಸ್ವಸ್ತಿಕ್, ಕಾರ್ತಿಕ್ ಹಾಗೂ ಅಪಾರ  ಶಿಷ್ಯವರ್ಗ, ಅಭಿಮಾನಿ ಬಳಗವನ್ನು ಅಗಲಿದ್ದಾರೆ.

ಪದ್ಯಾಣ ಗಣಪತಿ ಭಟ್ ಅವರ ನಿಧನಕ್ಕೆ ಯಕ್ಷಮಿತ್ರರು  ಮಾನ್ಯ ಶ್ರೀ ಅಯ್ಯಪ್ಪ ಸೇವಾ ಸಂಘ ಮಾನ್ಯ, ಸಾಮ್ರಾಟ್ ಮಾನ್ಯ ತೀವ್ರ ಸಂತಾಪ ಸೂಚಿಸಿದೆ.

NO COMMENTS

LEAVE A REPLY