ತೀವ್ರಗೊಂಡ ಮಳೆ, ಭೂಕುಸಿತ: ಪುಟ್ಟ ಮಕ್ಕಳ ಸಹಿತ ನಾಲ್ಕು ಮಂದಿ ಮೃತ್ಯು

0
52

ಕಲ್ಲಿಕೋಟೆ: ವಾಯುಭಾರ ಕುಸಿತದಿಂದಾಗಿ ಉಂಟಾದ ವ್ಯಾಪಕ ಮಳೆಯಿಂದಾಗಿ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.  ವಿವಿಧೆಡೆ ಮನೆ ಕುಸಿತ, ಮರಬಿದ್ದು ಇಬ್ಬರು ಪುಟ್ಟ ಮಕ್ಕಳ ಸಹಿತ ನಾಲ್ಕು ಮಂದಿ ಮೃತಪಟ್ಟಿದ್ದಾರೆ.  ಹಲವೆಡೆ ಗುಡ್ಡ ಕುಸಿತ, ವಿದ್ಯುತ್ ಅಸ್ತವ್ಯಸ್ಥ ಉಂಟಾಗಿದೆ. ವಿವಿಧ ನದಿಗಳಲ್ಲಿ ನೀರಿನ ಪ್ರಮಾಣ ಗರಿಷ್ಠ ಮಟ್ಟಕ್ಕೆ ಏರಿದೆ.

ಮಲಪ್ಪುರಂ  ಕರಿಪ್ಪೂರ್‌ನಲ್ಲಿ ಮನೆ ಕುಸಿದುಬಿದ್ದು, ಇಬ್ಬರು  ಪುಟ್ಟ ಮಕ್ಕಳು ಮೃತಪಟ್ಟಿದ್ದಾರೆ. ಬೇಕರಿ ಕಾರ್ಮಿಕ ನಾಗಿರುವ ಮುಹಮ್ಮದ್ ಕುಟ್ಟನಾಡ್, ಮಕ್ಕಳಾದ ಅಯಾನ ಫಾತಿಮ (೮), ಲುಬಾನ ಫಾತಿಮ (೭ ತಿಂಗಳು) ಮೃತಪಟ್ಟ ಮಕ್ಕಳು. ಇಂದು ಬೆಳಿಗ್ಗೆ ೫ ಗಂಟೆ ವೇಳೆ ಮನೆ ಬಳಿಯ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದು ಮಕ್ಕಳಿಬ್ಬರೂ ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಅಡೂರಿನಲ್ಲಿ ಚಲಿಸುತ್ತಿರುವ ಬೈಕ್ ಮೇಲೆ ಮರಬಿದ್ದು ಪತ್ರಕರ್ತ ಮೃತಪಟ್ಟ ಘಟನೆ ನಡೆದಿದೆ. ಜನ್ಮಭೂಮಿ ಅಡೂರು  ವರದಿಗಾರ ರಾಧಾಕೃಷ್ಣನ್ ಕುರುಪ್ (೫೭) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ೮ ಗಂಟೆ ವೇಳೆ ರಾಧಾಕೃಷ್ಣನ್ ಮನೆಗೆ ಹೋಗುತ್ತಿದ್ದಾಗ ಮರ ಬಿದ್ದು  ಮೃತಪಟ್ಟಿದ್ದಾರೆ. ಕೊಲ್ಲಂನಲ್ಲಿ ಗೋವಿಂದರಾಜು (೬೫) ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ರಾಜ್ಯದ ಹಲವು ನದಿಗಳು ಉಕ್ಕಿ ಹರಿದಿವೆ ಮಲಪ್ಪುರಂ, ಪಾಲಕ್ಕಾಡ್, ಕಲ್ಲಿಕೋಟೆ, ಕೊಲ್ಲಂ, ವಯನಾಡ್ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಉಂಟಾಗಿದೆ. ನೆಲ್ಲಿಯಾಂಬಲ ಘಾಟಿಯಲ್ಲಿ  ಮರಗಳು ಕುಸಿತವುಂಟಾಗಿದೆ.  ಕಾಞಿರಪುಳ ಅಣೆಕಟ್ಟಿನ ಶೆಟರ್‌ಗಳನ್ನು ತೆರಯ ಲಾಗಿದೆ. ಚಾಲಕುಡಿ ಹೊಳೆಯಲ್ಲಿ ಪ್ರವಾಹ ಉಂಟಾಗಿದೆ. ರಾಜ್ಯದಲ್ಲಿ ಈ ತಿಂಗಳ ೧೫ರ ವರೆಗೆ ಮಳೆ ಇರುವುದು ಎಂದು ಹವಾಮಾನ ನಿರೀಕ್ಷಕರು ಹೇಳಿದ್ದಾರೆ. ಇಂದು ರಾಜ್ಯದ ೬ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ೭ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಕಾಸರಗೋಡು, ಕಣ್ಣೂರು,  ಸಹಿತ ೭ ಜಿಲ್ಲೆಗಳಲ್ಲಿ  ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

NO COMMENTS

LEAVE A REPLY