ಹೊಳೆಯ ಬದಿಯಲ್ಲಿ ಬಚ್ಚಿಟ್ಟಿದ್ದ ಹೊಯ್ಗೆ ಸಂಗ್ರಹ ದೋಣಿಗಳನ್ನು ವಶಪಡಿಸಿ ನಾಶ

0
48

ಕುಂಬಳೆ: ಮುಟ್ಟಂಕಡವು ಬಳಿಯ ಶಿರಿಯ ಹೊಳೆಯ ಪೊದೆಗಳೊಳಗೆ ಹೊಯ್ಗೆ ಮಾಫಿಯಾ ಹೊಯ್ಗೆ ಸಂಗ್ರಹಿಸಲು ಬಚ್ಚಿಟ್ಟಿದ್ದ ಮೂರು ದೋಣಿಗಳನ್ನು ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಪಿ.ಪ್ರಮೋದ್ ವಶಪಡಿಸಿಕೊಂಡಿದ್ದಾರೆ. ಬಳಿಕ ಅವುಗಳನ್ನು ಜೆಸಿಬಿ ಬಳಸಿ ಪುಡಿಗೈಯ್ಯಲಾಯಿತು.

ಮೊಗ್ರಾಲ್ ಹೊಳೆಯಲ್ಲೂ, ಉಳುವಾರು ಹೊಳೆ ಹಾಗೂ ಶಿರಿಯದಲ್ಲೂ ಹೊಯ್ಗೆ ಮಾಫಿಯಾಗಳಿಗಾಗಿ ಭೇಟೆ ಮುಂದುವರಿಯಲಿದೆಯೆಂದು ಅವರು ತಿಳಿಸಿದ್ದಾರೆ.

ಶಿರಿಯ ಹೊಳೆಯ ಮುಟ್ಟಂ ತುರ್ತಿಯ ಕಾಡು ಪೊದೆಗಳನ್ನು ಕೇಂದ್ರೀಕರಿಸಿ ಹೊಯ್ಗೆ ಮಾಫಿಯಾ ಕಾರ್ಯಾಚರಿಸುತ್ತಿರುವುದಾಗಿಯೂ, ಅವರು ದೋಣಿಗಳನ್ನು ಅಲ್ಲಿ ಬಚ್ಚಿಟ್ಟಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಅಡಿಶನಲ್ ಎಸ್‌ಐ ಕೆ.ಪಿ.ಯು ರಾಜೀವನ್‌ರನ್ನು ಸೇರಿಸಿ ಇನ್‌ಸ್ಪೆಕ್ಟರ್ ಪ್ರಮೋದ್ ಕಡವಿಗೆ ತಲುಪಿದ್ದಾರೆ.

ಅನಂತರ ಅವರು ಹೊಳೆಗಿಳಿದು ಈಜಿ ತುರ್ತಿಗೆ ತಲುಪಿದ್ದು, ಬಳಿಕ ಅಲ್ಲಿ ದೋಣಿಗಳನ್ನು ಬಚ್ಚಿಟ್ಟಿರುವುದನ್ನು ಪತ್ತೆಹಚ್ಚಿದ್ದರು.

ಮೂರು ದೋಣಿಗಳನ್ನು ಹೊಳೆಗಿಳಿಸಿ ಅವರೇ ಅದನ್ನು ಕಡವಿಗೆ ತಲುಪಿಸಿದ ಬಳಿಕ ಜೆಸಿಬಿ ತಂದು ಅವುಗಳನ್ನು ಪುಡಿಗೈದಿದ್ದಾರೆ.

ಹೊಯ್ಗೆ ಸಂಗ್ರಹ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಾಗ ಹಲವೆಡೆಗಳಲ್ಲಿ ಹೊಯ್ಗೆ ಸಂಗ್ರಹ, ಸಾಗಾಟ ರಾತ್ರಿ ಹೊತ್ತಿನಲ್ಲಿ ವ್ಯಾಪಕವಾಗಿ ನಡೆಯುತ್ತಿರುವುದಾಗಿ ದೂರುಗಳು ಲಭಿಸಿವೆ. ಈ ಹಿನ್ನೆಲೆಯಲ್ಲಿ ಹೊಯ್ಗೆ ಬೇಟೆ ಆರಂಭಿಸಿರುವುದಾಗಿಯೂ, ಹೊಯ್ಗೆ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಮುಂದುವರಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY