ಜುಗಾರಿ ಅಡ್ಡೆಗೆ ಮಧ್ಯರಾತ್ರಿ ಪೊಲೀಸ್ ದಾಳಿ, ೭ ಮಂದಿ ಸೆರೆ

0
78

ಪೆರ್ಲ: ಇಲ್ಲಿನ ಚೆಕ್‌ಪೋಸ್ಟ್ ಬಳಿಯ ಗುಡ್ಡದ ಹಿಂಭಾಗದಲ್ಲಿನ ಜುಗಾರಿ ಅಡ್ಡೆಗೆ ಬದಿಯಡ್ಕ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜುಗಾರಿ ಆಟದಲ್ಲಿ ನಿರತರಾಗಿದ್ದ ೭ ಮಂದಿಯನ್ನು ಬಂಧಿಸಲಾಗಿದೆ. ಆಟಕ್ಕೆ ಬಳಸಿದ ೧೧,೭೫೦ ರೂ. ವಶಪಡಿಸಲಾಗಿದೆ. ಕನ್ನಡಿಕಾನ ನಿವಾಸಿ ಮೊದೀನ್ ಕುಂಞಿ (೬೦), ಪೆರ್ಲ ನಿವಾಸಿ ಮೊದು (೫೨), ಶೇಣಿ ನಿವಾಸಿ ಸಜಿ ವರ್ಗೀಸ್ (೪೨), ಪಳ್ಳಕಾನ ನಿವಾಸಿ ಕೃಷ್ಣ (೫೦), ಪೆರ್ಲ ನಿವಾಸಿ ಅಬ್ದುಲ್ ಕರೀಂ (೪೮), ಪರ್ತಾಜೆ ನಿವಾಸಿ ರವಿ (೫೮), ಕುರಡ್ಕ ನಿವಾಸಿ ಗಿರೀಶ (೩೮) ಬಂಧಿತರು.

ಬದಿಯಡ್ಕ ಎಸ್‌ಐ ವಿನೋದ್ ಕುಮಾರ್, ಇತರರಾದ ಪ್ರವೀಣ್, ಮನೋಜ್, ಜಯಪ್ರಕಾಶ್ ಎಂಬಿವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ನಿನ್ನೆ ರಾತ್ರಿ ೧ ಗಂಟೆಯ ವೇಳೆ ಈ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ಕಳೆದ ಎರಡು ವರ್ಷದಿಂದ ಜುಗಾರಿದಂಧೆ ನಡೆಯುತ್ತಿದ್ದು, ಬಾರೀ ಮಂದಿ ಸೇರುತ್ತಿದ್ದರು. ವಿಟ್ಲ, ಪೆರ್ಲ, ಕಾಸರಗೋಡು, ಬದಿಯಡ್ಕ, ಚೆರ್ಕಳ ಭಾಗದಿಂದ ಇಲ್ಲಿಗೆ ಜುಗಾರಿ ದಂಧೆಗೆ ಜನರು ಆಗಮಿಸುತ್ತಿದ್ದರು. ಪೊಲೀಸರು ಇತ್ತ ದಾಳಿಗೆ ಹೊರಟರೆ ಕೂಡಲೇ ಜುಗಾರಿ ದಂಧೆಯ ಸದಸ್ಯರಿಗೆ ಮಾಹಿತಿ ಲಭಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸರು ವೇಷ ಬದಲಿಸಿ ದಾಳಿ ನಡೆಸಿದ್ದರು.

NO COMMENTS

LEAVE A REPLY