ಕಾರಿನಲ್ಲಿ ಒಂದಂಕೆ ಜುಗಾರಿ : ೨ ಲಕ್ಷ ರೂ. ಸಹಿತ ಓರ್ವ ಸೆರೆ

0
79

ಕಾಸರಗೋಡು: ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದಂಕೆ ಜುಗಾರಿ ದಂಧೆ  ನಡೆಸುತ್ತಿದ್ದ ಓರ್ವನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಉದುಮ ಪಾಲಕುನ್ನು ನಿವಾಸಿ ಜಗದೀಶ್ (೪೪)ಬಂಧಿತ ಆರೋಪಿ. ಬೇಕಲ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ಹಾಗೂ ತಂಡ ಕಳೆದ ಕೆಲವು ದಿನಗಳಿಂದ ನಿಗಾ ವಹಿಸಿದ ನಂತರ ಈತನ ಬಂಧನ ನಡೆದಿದೆ. ಈತನ ಕೈಯಿಂದ ೨,೦೨,೪೦೦ ರೂ., ೩ ಮೊಬೈಲ್ ಫೋನ್ ಎಂಬಿವುಗಳನ್ನು ವಶಪಡಿಸಲಾಗಿದೆ.

ಈತ ಕಾರಿನಲ್ಲಿ ಪ್ರಯಾಣಿಸಿ ವಿವಿಧ ಕಡೆಗಳಿಂದ ಮೊಬೈಲ್ ಮೂಲಕ ಮಟ್ಕಾ ರೀತಿಯ ಒಂದಂಕೆ ಜುಗಾರಿ ಹಣ ಸಂಗ್ರಹಿಸುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಬೇಕಲ ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್‌ರಿಗೆ ರಹಸ್ಯ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯ ಚಲನವಲನದ ಬಗ್ಗೆ  ನಿಗಾ ಇರಿಸಿದರು. ಆರೋಪಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ.

ರಾಜ್ಯದಲ್ಲಿ ಸಮಾನಾಂತರ ಲಾಟರಿ ದಂಧೆ ವ್ಯಾಪಕವಾಗಿ ನಡೆಯುತ್ತಿದೆಯೆಂದು ಈ ಹಿಂದೆಯೇ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ  ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು. ಬದಿಯಡ್ಕ, ಆದೂರು, ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ದಂಧೆ ನಡೆಯುತ್ತಿದೆ. ಈ ಬಗ್ಗೆ  ಪೊಲೀಸರು ಕಾರ್ಯಾಚರಣೆ ಬಿಗುಗೊಳಿಸಿದ್ದಾರೆ.

NO COMMENTS

LEAVE A REPLY