ಚಿನ್ನ ವ್ಯಾಪಾರಿಯ ಚಾಲಕನ ದರೋಡೆ ಆರೋಪಿಯ ಮನೆಯಿಂದ ಹಣ ವಶ

0
124

ಕಾಸರಗೋಡು: ಚಿನ್ನದ ವ್ಯಾಪಾರಿಯ ಚಾಲಕನ ಕೈಯಿಂದ ಹಣ ದರೋಡೆಗೈದ ಪ್ರಕರಣದಲ್ಲಿ ಬಂಧಿತ ಆರೋಪಿಯ ಮನೆಯಿಂದ ೧೨.೮೦ ಲಕ್ಷ ರೂ. ಹಾಗೂ ಒಂದು ಇನೋವಾ ಕಾರು ವಶಪಡಿಸಲಾಗಿದೆ. ಬಂಧಿತ ಆರೋಪಿ ಬಿನಾಯ್ ಸಿ. ಬೇಬಿ ಎಂಬಾತನ ತೃಶೂರು ಚಿಟ್ಟಿಲ ಪಳ್ಳಿ ಮನೆಯಿಂದ ನಿನ್ನೆ ಕಾಸರಗೋಡು ಪೊಲೀಸರು ಹಣ ಹಾಗೂ ಕಾರು ವಶಪಡಿಸಿದ್ದಾರೆ. ವಶಪಡಿಸಿದ ಕಾರು, ದರೋಡೆಗೆ ಬಳಸಿದ ವಾಹನ ಎಂದು ತಿಳಿದು ಬಂದಿದೆ. ಚಿನ್ನದ ವ್ಯಾಪಾರಿ ವಿಕಾಸ್‌ರವರ ಕಾರು ಚಾಲಕ ರಾಹುಲ್ ಮಹಾದೇವ್‌ರನ್ನು ಕಳೆದ ತಿಂಗಳ ೨೨ರಂದು ಮೊಗ್ರಾಲ್‌ಪುತ್ತೂರಿನಿಂದ ದರೋಡೆಗೈಯ್ಯಲಾಗಿತ್ತು. ರಾಹುಲ್ ಮಹಾದೇವ್ ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಬರುವ ವೇಳೆ ಮೊಗ್ರಾಲ್‌ಪುತ್ತೂರಿನಲ್ಲಿ ದರೋಡೆ ನಡೆದಿತ್ತು. ಈ ಪ್ರಕರಣದಲ್ಲಿ ತೃಶೂರು ನಿವಾಸಿಗಳಾದ ಅಖಿಲ್ ಟೋಮಿ, ಬಿನಾಯ್ ಸಿ.ಬೇಬಿ, ಅನು ಶಾಜು ಎಂಬಿವರನ್ನು ಬಂಧಿಸಲಾಗಿತ್ತು.

NO COMMENTS

LEAVE A REPLY