ಹೆಚ್ಚುತ್ತಿರುವ ನಕಲಿ ನಂಬ್ರದ ವಾಹನಗಳು ತನಿಖೆ ತೀವ್ರ

0
96

ಕಾಸರಗೋಡು: ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳನ್ನೆಸಗಲು ನಕಲಿ ನಂಬ್ರ ಅಳವಡಿಸಿದ ವಾಹನಗಳನ್ನು ಹೆಚ್ಚಾಗಿ ಬಳಸು ತ್ತಿರುವುದು ಅಧಿಕಾರಿಗಳ ಗಮ ನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವಾಹನ ತಪಾಸಣೆ ಬಿಗು ಗೊಳಿಸಲಾಗಿದೆ.

ಇತ್ತೀಚೆಗೆ ಕಾಞಂಗಾಡ್ ನಲ್ಲಿ ಮೋಟಾರು ವಾಹನ ಇಲಾಖೆ ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ನಕಲಿ ನಂಬ್ರ ಪ್ಲೇಟ್ ಹೊಂದಿದ  ಬೈಕ್‌ನ್ನು ಪತ್ತೆಹಚ್ಚಲಾಗಿದೆ. ಚಿತ್ತಾರಿ ಜಮಾ ಯತ್ ಹೈಯರ್ ಸೆಕೆಂಡರಿ ಶಾಲೆ ಪರಿಸರದಿಂದ ಬೈಕ್ ಕಸ್ಟ ಡಿಗೆ ತೆಗೆಯಲಾಗಿದೆ. ಪ್ಲಸ್‌ವನ್ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಯೋರ್ವ ಈ ಬೈಕ್ ತಂದಿರುವುದಾಗಿ ತಿಳಿದುಬಂದಿದೆ.  ವಾಹನದ ಚೇಸಿಸ್ ನಂಬ್ರ, ಇಂಜಿನ್ ನಂಬ್ರ ಪರಿಶೀಲಿಸಿ ದಾಗ ಈ ವಾಹನ ಗುಜರಾತ್ ನಲ್ಲಿ ನೋಂದಾಯಿಸಿರುವುದಾಗಿ ತಿಳಿದುಬಂದಿದೆ.

NO COMMENTS

LEAVE A REPLY