ಜುಗಾರಿ: ನಾಲ್ವರ ಸೆರೆ

0
80

ಆದೂರು: ಅತ್ತನಾಡಿ ಬಳಿಯ ಸೇತುವೆ ಪರಿಸರದಲ್ಲಿ ಜುಗಾರಿ ದಂಧೆಯಲ್ಲಿ ನಿರತರಾಗಿದ್ದ ೪ ಮಂದಿಯನ್ನು ಆದೂರು ಪೊಲೀಸರು ಬಂಧಿಸಿದ್ದಾರೆ. ಅಡೂರು ನಿವಾಸಿ ಗಂಗಾಧರ (೨೮), ಕುಂಟಾರು ನಿವಾಸಿ ಕೀರ್ತಿ (೩೦), ಉಯಿತ್ತಡ್ಕ ನಿವಾಸಿ  ಸೀತಾರಾಮ (೩೧), ಕರ್ನೂರು ನಿವಾಸಿ ಶಶಿ (೩೨) ಬಂಧಿತರು. ಇವರ ಕೈಯಿಂದ ಆಟಕ್ಕೆ ಬಳಸಿದ ೧೩೨೦ ರೂ. ವಶಪಡಿಸಲಾಗಿದೆ. ಆದೂರು ಎಸ್‌ಐ ಇ. ರತ್ನಾಕರನ್ ನೇತೃತ್ವದ ಪೊಲೀಸರು  ದಾಳಿ ನಡೆಸಿದರು.

NO COMMENTS

LEAVE A REPLY