ಮನೆಯ ಬೀಗ ಮುರಿದು ನಗ, ನಗದು ಕಳವು

0
56

ಕಾಸರಗೋಡು: ಮನೆಯ ಬೀಗ ಒಡೆದು ಮಲಗುವ ಕೋಣೆಯ ಕಪಾಟಿನಲ್ಲಿದ್ದ ಎರಡೂವರೆ ಪವನ್ ಚಿನ್ನಾಭರಣ ಹಾಗೂ ೧೦ ಸಾವಿರ ರೂ. ಕಳವುಗೈದ ಪ್ರಕರಣ ನಡೆದಿದೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪನ್ನಿಪ್ಪಾರ ಪಿಂಕ್ ಕ್ವಾರ್ಟರ್ಸ್‌ನಲ್ಲಿ ಕಳವು ನಡೆದಿದೆ. ಇಲ್ಲಿನ ಹಿಲ್ಡಾ  ಮೋರೋಸ್ ಎಂಬವರ ಮನೆ ಇದಾಗಿದೆ.  ಇವರು ಮನೆಯಿಂದ ಹೊರಗೆ ಹೋಗಿದ್ದ ವೇಳೆ ಕಳ್ಳತನ ನಡೆದಿದೆ. ಮನೆಯ ಮಲಗುವ ಕೊಠಡಿಯ ಕಪಾಟು ಒಡೆದು ಹಣ ಹಾಗೂ ಆಭರಣ ಕಳವು ನಡೆದಿದೆ. ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY