ಕುಬಣೂರು ಸುವರ್ಣಗಿರಿ ಹೊಳೆಯ ಹಳೆ ಸೇತುವೆ ಸಂಪೂರ್ಣ ಕುಸಿತ: ಸಂಚಾರಕ್ಕೆ ಸಮಸ್ಯೆ

0
110

ಉಪ್ಪಳ: ಕುಬಣೂರಿನಲ್ಲಿ ಹಳೆಯ ಸಂಕವೊಂದು ಇಂದು ಬೆಳಿಗ್ಗೆ ಕುಸಿದು ಬಿದ್ದಿದ್ದು, ಈ ಪ್ರದೇಶದ ಜನರ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಕುಬಣೂರಿನಲ್ಲಿ ಸುವರ್ಣಗಿರಿ ಹೊಳೆಗೆ ಅಡ್ಡವಾಗಿ ನಿರ್ಮಿಸಿದ್ದ ಹಳೇಯ ಸೇತುವೆ ಇಂದು ಬೆಳಿಗ್ಗೆ ಕುಸಿದುಬಿದ್ದಿದೆ. ಇದರಿಂದಾಗಿ ಈ ಪ್ರದೇಶದ ಜನರಿಗೆ ಅತ್ತಿತ್ತ ಸಂಚರಿಸ ಬೇಕಾದರೆ ಸುತ್ತುಬಳಸಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.  ಇಂದು ಬೆಳಿಗ್ಗೆ ಸುಮಾರು ೧೦.೩೦ರ ವೇಳೆ ಬೈಕ್ ಒಂದು ಈ  ಸೇತುವೆ ಮೂಲಕ ಸಂಚರಿಸಿದ ಕೂಡ ಲೇ ಸೇತುವೆ ಕುಸಿದಿದೆ. ಆದರೆ ಅಪಾಯ ಅದೃಷ್ಟವಶಾತ್ ದೂರ ಸರಿದಿದೆ.

ಇತ್ತೀಚೆಗೆ  ಬೃಹತ್ ಮರ ಕುಸಿದು ಬಿದ್ದು ಈ ಸೇತುವೆಯ ಕಂಬಕ್ಕೆ ಹಾನಿಯುಂಟಾಗಿತ್ತು.   ಸೇತುವೆಯ ಒಂದು ಬದಿ ಯಾವುದೇ ಕ್ಷಣದಲ್ಲಿ  ಕುಸಿಯುವ ಭೀತಿಯಲ್ಲಿತ್ತು. ಈ ಬಗ್ಗೆ ಕಾರವಲ್ ವರದಿ ಪ್ರಕಟಿಸಿತ್ತು. ಸ್ಥಳೀಯರ ಮನವಿಯಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಸಂದರ್ಶಿಸಿದ್ದರು. ಅಲ್ಲದೆ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು.

ಆದರೆ ಇತ್ತೀಚೆಗಿನಿಂದ ತಡೆಯನ್ನು ತೆರವುಗೊಳಿಸಿ ಕಾರು, ಟೆಂಪೋ  ಸಹಿತ ಹಲವು ವಾಹನಗಳು ಈ ಸಂಕದ ಮೂಲಕ ಸಂಚರಿಸುತ್ತಿತ್ತೆನ್ನಲಾಗಿದೆ. ಇದರಿಂದಾಗಿ ಬಿರುಕು ಬಿಟ್ಟ ಈ ಸಂಕ ಮತ್ತಷ್ಟು ಬಿರುಕು ಬಿಟ್ಟು ಇಂದು ಬೆಳಿಗ್ಗೆ ಕುಸಿದಿದೆ.

ಕಂಬ ಕುಸಿದ ಕೂಡಲೇ ಸ್ಥಳೀಯರು ತಾತ್ಕಾಲಿಕವಾಗಿ ಸೇತುವೆ ಗಟ್ಟಿಗೊಳಿಸುವ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಆದರೆ ಪಂಚಾಯತ್ ಅಧಿಕಾರಿಗಳು ಮೌನ ವಹಿಸಿರುವುದಾಗಿ ಸ್ಥಳೀಯರು ದೂರಿದ್ದಾರೆ.

NO COMMENTS

LEAVE A REPLY