ರಾಜ್ಯದಲ್ಲಿ ಅತೀ ತೀವ್ರ ಮಳೆ ಸಾಧ್ಯತೆ: ೧೧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

0
106

ತಿರುವನಂತಪುರ: ಅರಬೀ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ  ಅತೀ ತೀವ್ರ ಮಳೆ ಉಂಟಾಗಿದೆಯೆಂದು ಹವಾಮಾನ  ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ  ರಾಜ್ಯದ ೧೧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತಿರುವನಂತಪುರದಿಂದ ಕಲ್ಲಿಕೋಟೆ ವರೆಗೆ ೧೧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರಾಜ್ಯದಲ್ಲಿ  ಸಿಡಿಲು ಸಹಿತದ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಪ್ರವಾಸ, ಇತರ ಕಾರ್ಯಕ್ರಮಗಳನ್ನು ರದ್ದು ಪಡಿಸಬೇಕೆಂದು ಆಡಳಿತ ಎಚ್ಚರಿಕೆ ನೀಡಿದೆ. ವಿವಿಧೆಡೆ ಜಲಾಶಯಗಳು ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟುಗಳನ್ನು ತೆರೆಯ ಬೇಕಾದೀತೆಂದು ಅಧಿಕಾರಿಗಳು ತಿಳಿಸಿದ್ದಾರೆ.

೨೦೧೮ರಲ್ಲಿ ಉಂಟಾದ ಪ್ರವಾಹದ ರೀತಿಯಲ್ಲಿಯೇ  ವಿವಿಧೆಡೆ ಮಳೆ ಉಂಟಾಗಲಿದೆಯೆಂದು ತಿಳಿದುಬಂದಿದೆ. ವಿವಿಧೆಡೆ ನೀರ ತುಂಬಿ ವಾಹನ ಸಂಚಾರ ಮೊಟಕುಗೊಂಡಿದೆ.  ಜಿಲ್ಲಾ ಕೇಂದ್ರಗಳಲ್ಲಿ ಕಂಟ್ರೋಲ್ ರೂಂಗಳನ್ನು ಯಾವುದೇ ಕ್ಷಣ ತೆರೆಯುವ ಸಾಧ್ಯತೆಯಿದೆ. ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ಜಾಗ್ರತೆ ವಹಿಸಲು ಆದೇಶಿಸಲಾಗಿದೆ. ರಾಜ್ಯದ ವಿವಿಧ ನದಿಗಳು ಉಕ್ಕಿ ಹರಿಯುತ್ತಿದೆ.

NO COMMENTS

LEAVE A REPLY