೧.೯೨ ಕೋಟಿ ಬೆಲೆಯ ನಕಲಿ ನೋಟುಗಳು ವಶ: ಮೂವರ ಸೆರೆ

0
25

ಮಂಗಳೂರು: ಕೋಟಿ ಗಟ್ಟಲೆ ರೂ. ನಿಷೇಧಿತ ನೋಟುಗಳ ಸಹಿತ ಮೂರು ಮಂದಿಯನ್ನು ಮಂಗಳೂರಿನಿಂದ ಬಂಧಿಸಲಾಗಿದೆ. ಮಂಗಳೂರು ಕಣ್ಣೂರಿನ ಸುಬೈಲ್ ಹಮ್ಮುಬ್ಬ (೫೨), ಬಜ್ಪೆ ನಿವಾಸಿ ಅಬ್ದುಲ್ ನಸೀರ್ (೪೦), ಪಡೀಲು ನಿವಾಸಿ ದೀಪಕ್ ಕುಮಾರ್ (೩೨) ಬಂಧಿತರು ಇವರ ಕೈಯಿಂದ ೧,೯೨,೫೦,೦೦೦ ರೂ.ಗಳ ನಿಷೇಧಿತ ನೋಟು ಗಳನ್ನು ಮಂಗಳೂರು ಪೊಲೀ ಸರು ವಶಪಡಿಸಿಕೊಂಡಿದ್ದಾರೆ. ೧ಸಾವಿರ ರೂ. ಬೆಲೆಯ ೧೦ ಕಟ್ಟುಗಳು, ೫೦೦ ರೂ. ಬೆಲೆಯ ೫೭ ಕಟ್ಟುಗಳು ವಶಪಡಿಸ ಲಾಗಿದೆ. ಅಡ್ಯಾರ್‌ನಿಂದ ಲಾಲ್‌ಬಾಗ್‌ಗೆ ಕಾರಿನಲ್ಲಿ ಹಣ ಒಯ್ಯುತ್ತಿದ್ದಾಗ, ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ವಶಪಡಿಸಿದ್ದಾರೆ. ಶಿವಮೊಗ್ಗದಿಂದ ಈ ಹಣ ತರಲಾಗುತ್ತಿತ್ತು ಎಂದು ತಿಳಿದು ಬಂದಿದೆ.

NO COMMENTS

LEAVE A REPLY