ಕಣಜದ ಹುಳು ದಾಳಿ ಮೀನು ಕಾರ್ಮಿಕೆ ಮೃತ್ಯು

0
31

ಕಾಸರಗೋಡು: ಕಣಜದ ಹುಳದ ದಾಳಿಯಿಂದ ಗಾಯ ಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಮಹಿಳೆ ಮೃತಪಟ್ಟ ಘಟನೆ ನಡೆದಿದೆ. ಬೇಕಲ ಪೊಲೀಸ್ ಠಾಣೆಯ ಮುಂಭಾಗದಲ್ಲಿ ವಾಸಿಸುವ  ದಿ| ಕೊಂದ ಅವರ ಪತ್ನಿ ಪಾರು (೭೦) ಮೃತಪಟ್ಟ ಮಹಿಳೆ. ಅವರು ಮಂಗಳೂರು ಆಸ್ಪತ್ರೆಯಲ್ಲಿ ನಿನ್ನೆ ಕೊನೆಯುಸಿರೆಳೆದರು.

ಮನೆ ಮನೆಗಳಿಗೆ ತೆರಳಿ ಮೀನು ಮಾರುವ ಕಾರ್ಮಿಕೆಯಾಗಿ ದ್ದಾರೆ ಪಾರು. ಈ ತಿಂಗಳ ೧೪ರಂದು ಇವರು ಮೀನು ಮಾರಾಟ ಮಾಡು ತ್ತಿರುವ ವೇಳೆ ಇವರಿಗೆ ಕಣಜದ ಹುಳ ದಾಳಿ ನಡೆಸಿತ್ತು. ಗಂಭೀರ ಗಾಯಗೊಂಡ ಇವರನ್ನು ಸ್ಥಳೀ ಯರು ಕೂಡಲೇ ಉದುಮ ಖಾಸಗಿ ನರ್ಸಿಂಗ್ ಹೋಂಗೆ ಕೊಂಡೊ ಯ್ದರು. ಆದರೆ ಸ್ಥಿತಿ ಚಿಂತಾಜನಕ ವಾದ ಹಿನ್ನೆಲೆಯಲ್ಲಿ ಅವರನ್ನು ಕಾಸರಗೋಡು ಖಾಸಗಿ ಆಸ್ಪತ್ರೆಗೂ, ನಂತರ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಮೃತರು ಮಕ್ಕ ಳಾದ ಶ್ರೀಮತಿ, ಸರೋಜಿನಿ, ಸತೀ ಶನ್, ಅಳಿಯಂದಿ ರಾದ ಮೋ ಹನನ್, ರಾಘವನ್, ಸಹೋದರ-ಸಹೋದರಿಯರಾದ ಕುಂಬ, ಮುಕುಂದನ್, ವಾಮನನ್, ದಿವಾ ಕರನ್ ಎಂಬವರನ್ನು ಅಗಲಿದ್ದಾರೆ.

NO COMMENTS

LEAVE A REPLY