ಪುಟ್ಟ ಮಕ್ಕಳೊಂದಿಗೆ ಯುವತಿ ನಾಪತ್ತೆ

0
41

ಕಾಸರಗೋಡು: ವಿವಾಹಿತ ಮಹಿಳೆ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಮನೆ ಬಿಟ್ಟ ಘಟನೆ ನಡೆದಿದೆ. ಚೆಮ್ನಾಡ್ ಕುನ್ನುಪ್ಪಾರ ನಿವಾಸಿ ರೇಶ್ಮಾ (೨೮) ತನ್ನ ಇಬ್ಬರು ಮಕ್ಕಳಾದ ಅಕ್ಷಯ್ (೧೦), ಅಮಯ (೬) ಎಂಬಿವರನ್ನು ಕರೆದುಕೊಂಡು ಹೋಗಿದ್ದು, ಮೂರು ಮಂದಿಯೂ ಇದೀಗ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ರೇಶ್ಮಾಳ ತಾಯಿ ಭಾರ್ಗವಿ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರೇಶ್ಮಾ ತನ್ನ ಪತಿಯೊಂದಿಗೆ ವಿರಸದಿಂದಿದ್ದು, ಪತಿಗೆ ಅಪಾರ ಸಾಲ ಇತ್ತೆನ್ನಲಾಗಿದೆ. ಈಕೆ ತಾಯಿಯ ಜತೆ ವಾಸಿಸುತ್ತಿದ್ದಾಳೆ. ಈ ಹಿನ್ನೆಲೆಯಲ್ಲಿ ಆಕೆ ಮಕ್ಕಳೊಂದಿಗೆ ನಾಪತ್ತೆಯಾಗಿರಬೇಕು ಎಂದು ಶಂಕಿಸಲಾಗಿದೆ. ಮೇಲ್ಪರಂಬ ಇನ್ಸ್‌ಪೆಕ್ಟರ್ ಟಿ. ಉತ್ತಮದಾಸ್‌ರ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.

NO COMMENTS

LEAVE A REPLY