ಅಪರಿಚಿತನಿಂದ ಮನೆಗೆ ಬೆಂಕಿ: ಓರ್ವನಿಗೆ ಗಾಯ

0
34

ಮುಳ್ಳೇರಿಯ: ಅಪರಿಚಿತ ವ್ಯಕ್ತಿ ಮನೆಗೆ ಕಿಚ್ಚಿಟ್ಟ ಪ್ರಕರಣ ನಡೆದಿದೆ. ಕುಂಟಾರು, ಪೋಕರಡ್ಕ ನಿವಾಸಿ ಹಸೈನಾರ್ ಎಂಬವರ ಕಾಂಕ್ರೀಟು ಮನೆಗೆ ನಿನ್ನೆ ರಾತ್ರಿ ೧೨ ಗಂಟೆಯ ವೇಳೆ ಕಿಚ್ಚಿಡಲಾಗಿದೆ. ಕಿಟಕಿ ಮೂಲಕ ತೆಂಗಿನ ಮಡಲು ಹೊತ್ತಿಸಿ ಕಿಚ್ಚಿಡಲಾಗಿದೆ. ಈ ವೇಳೆ ಕಿಟಿಕಿ ಗಾಜು ಒಡೆದಿದ್ದು, ಹಸೈನಾರ್ ಅವರಿಗೆ ಗಾಯಗಳಾಗಿವೆ. ಅವರು ಮುಳ್ಳೇರಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದೂರು ಎಸ್.ಐ. ಇ. ರತ್ನಾಕರನ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪುರಾವೆ ಸಂಗ್ರಹಿಸಿದ್ದಾರೆ. ಆರೋಪಿಯ ಬಗ್ಗೆ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ೧೨ ಗಂಟೆಯ ವೇಳೆ ಕಿಟಕಿಯ ಗಾಜು ಒಡೆದ ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದಾರೆ.

NO COMMENTS

LEAVE A REPLY