ಪತಿ, ಮಕ್ಕಳನ್ನು ತೊರೆದು ಪ್ರಿಯತಮನ ಜೊತೆ ಪರಾರಿಯಾದ ಯುವತಿ ಬೀದಿಪಾಲು

0
39

ಕಣ್ಣೂರು: ಕೊಲ್ಲಿ ಉದ್ಯೋಗಿ ಯಾದ ಪತಿ ಹಾಗೂ ಮೂರು ಮಂದಿ ಮಕ್ಕಳನ್ನು ತೊರೆದು ಪ್ರಿಯತಮನ ಜೊತೆ ಪರಾರಿಯಾದ ಯುವತಿಯನ್ನು ಪ್ರಿಯಕರನೂ ಕೈಬಿಟ್ಟ ಘಟನೆ ನಡೆದಿದೆ. ಕೊನೆಗೆ ಯುವತಿ ನಿನ್ನೆ ಪಯ್ಯನ್ನೂರು ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಪಯ್ಯನ್ನೂರು ಠಾಣಾ ವ್ಯಾಪ್ತಿಯ ಮೂರು ಮಕ್ಕಳ ತಾಯಿ ತನ್ನ ಪತಿಯನ್ನು ತೊರೆದು ೮ ವರ್ಷಗಳ  ಹಿಂದೆ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಪ್ರಿಯಕರನಿಗೆ ಜಪಾನ್‌ನಲ್ಲಿ ಪತ್ನಿಯಿರುವುದು ಯುವತಿಗೆ ತಿಳಿದಿರಲಿಲ್ಲ.  ೮ ವರ್ಷಗಳ ನಂತರ   ಯುವತಿ ಹಾಗೂ ಪ್ರಿಯಕರನ ಮಧ್ಯೆ ವಿರಸಮೂಡಿತ್ತು. ನಿನ್ನೆ ಮಧ್ಯಾಹ್ನ ಪಯ್ಯನ್ನೂರು ಠಾಣೆಗೆ  ಆಗಮಿಸಿದ ಯುವತಿ, ತನ್ನ ೨೫ ಪವನ್ ಚಿನ್ನ ಪ್ರಿಯಕರ ವಸೂಲು ಮಾಡಿದ್ದು ತನ್ನನ್ನು ವಂಚಿಸಿರುವುದಾಗಿ    ನಡೆಸಿರುವುದಾಗಿ ದೂರಿದ್ದಾಳೆ. ಇದರಂತೆ ಪ್ರಿಯಕರ ಸುರೇಶ್ ಕುಮಾರ್ (೪೪)ನನ್ನು ಪೊಲೀಸರು ಬಂಧಿಸಿದ್ದಾರೆ.

NO COMMENTS

LEAVE A REPLY