ಕುಸಿದು ಬಿದ್ದು ಮಹಿಳೆ ಮೃತಪಟ್ಟ ಘಟನೆ: ಮೃತದೇಹ ಪರಿಯಾರಂಗೆ

0
34

ಬೋವಿಕ್ಕಾನ: ಮನೆಯಲ್ಲಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟ ಬೀಡಿ ಕಾರ್ಮಿಕೆಯ ಮೃತದೇಹವನ್ನು ಮಹಜರಿಗಾಗಿ ಪರಿಯಾರಂ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಬೋವಿಕ್ಕಾನ ಮೊದಲಪಾರ ನಿವಾಸಿ ಅಶೋಕರ ಪತ್ನಿ ಬಿಂದು (೩೩)ರ ಮೃತದೇಹ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತದೇಹದ ಪೋಸ್ಟ್‌ಮಾರ್ಟಂ ಇಂದು ನಡೆಯಲಿದೆ ಎಂದು ಆದೂರು ಪೊಲೀಸರು ತಿಳಿಸಿದ್ದಾರೆ.

ಬೀಡಿ ಕಾರ್ಮಿಕೆಯಾದ ಬಿಂದು ಮಂಗಳವಾರ ಸಂಜೆ ಮನೆಯಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಇವರನ್ನು ಬೋವಿ ಕ್ಕಾನ ಆಸ್ಪತ್ರೆಗೂ ಅನಂತರ ಕಾಸರಗೋಡು ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪಿದ ಕೂಡಲೇ ಅವರು ಮೃತಪಟ್ಟಿದ್ದರು. ಈ ಬಗ್ಗೆ ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

NO COMMENTS

LEAVE A REPLY