ಸಂಜಿತ್ ಕೊಲೆ ತನಿಖೆ ಎನ್‌ಐಎಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಬಿಜೆಪಿಯಿಂದ ಕಲೆಕ್ಟರೇಟ್ ಮಾರ್ಚ್

0
21

ಕಾಸರಗೋಡು: ಪಾಲಕ್ಕಾಡ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಸಂಜಿತ್ ರನ್ನು ಹತ್ಯೆಗೈದ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಸಮಿತಿ ಆಶ್ರಯ ದಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಗೆ ಮಾರ್ಚ್ ನಡೆಯಿತು. ವಿದ್ಯಾನಗರ ಪರಿಸರದಿಂದ ಆರಂಭಗೊಂಡ ಮಾರ್ಚ್‌ನ್ನು ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ರಾಷ್ಟ್ರೀ.ಯ ಸಮಿತಿ ಸದಸ್ಯ ಸಿ.ಕೆ ಪದ್ಮನಾಭನ್ ಉದ್ಘಾಟಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದರು. ನೇತಾರರಾದ ವೇಲಾಯುಧನ್,    ವಿಜಯ ರೈ, ಪಿ. ರಮೇಶ್, ಸುಧಾಮ ಗೋಸಾಡ, ಜನನಿ, ಕೋಳಾರು ಸತೀಶ್ಚಂದ್ರ ಭಂಡಾರಿ, ಪ್ರಮೀಳಾ ಸಿ. ನಾಯ್ಕ್ ಮೊದ ಲಾದವರು ಭಾಗವಹಿಸಿದರು.  ಇದೇ ಬೇಡಿಕೆ ಮುಂದಿರಿಸಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗೆ ಬಿಜೆಪಿ ಆಶ್ರಯದಲ್ಲಿ ಮಾರ್ಚ್ ನಡೆಯಲಿದೆ.

NO COMMENTS

LEAVE A REPLY