ಜಿಲ್ಲೆಯಲ್ಲಿ ಭೂಮಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ-ಕಂದಾಯ ಸಚಿವ

0
32

ಕಾಸರಗೋಡು: ಜಿಲ್ಲೆಯ ಭೂಮಿ ಸಂಬಂಧ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಉಂಟಾಗಲಿದೆಯೆಂದು ರಾಜ್ಯ ಕಂದಾಯ ಸಚಿವ ಕೆ. ರಾಜನ್ ಹೇಳಿದ್ದಾರೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲೆಗಾಗಮಿಸಿದ ಅವರು ಪತ್ರಿಕಾಗೋಷ್ಠಿಯಲ್ಲಿ  ಮಾತನಾಡುತ್ತಿದ್ದರು.

ಪಟ್ಟಾ ವಿತರಣೆಗೆ ಆದ್ಯತೆ ನೀಡಲಾಗುವುದು. ಜಿಲ್ಲೆಯ ಎಲ್ಲಾ ಭೂಮಿ ಸಂಬಂಧ ಸಮಸ್ಯೆಗಳಿಗೆ ಪರಿಹಾರಕ್ಕೆ ಆದ್ಯತೆ  ನೀಡಲಾಗುವುದು ಎಂದವರು ಹೇಳಿದರು.  ಸರಕಾರಿ ಸ್ಥಳ ಕೈವಶವಿರಿಸುವವರಿಗೆ ದಾಖಲೆಪತ್ರ ನೀಡುವ ಕುರಿತು ಚಿಂತನೆ ನಡೆದಿದೆ. ಭೂಮಿ ಸಂಬಂಧ ಸಮಸ್ಯೆಗಳ ಪರಿಹಾರದಲ್ಲಿ ಡ್ಯಾಶ್ ಬೋರ್ಡ್ ಎಂಬ ಪ್ರತ್ಯೇಕ ವಿಧಾನ ಆರಂಭವಾಗಲಿದೆ.

ಸ್ಥಳ ಸಂಬಂಧ  ಹಲವು ದೂರುಗಳು ಈಗಾಗಲೇ ಆರ್‌ಡಿಒಗಳಿಗೆ ಲಭಿಸಿದೆ. ಇದನ್ನು ಪರಿಹರಿಸಲಾಗುವುದು.  ರಾಜ್ಯ ದಲ್ಲಿ ಸ್ಥಳಕ್ಕೆ ಸಂಬಂಧಿಸಿದ ದೂರುಗಳ ಕುರಿತು ಪರಿಶೀಲನೆಗೆ ಸಚಿವ ಸಂಪುಟ ರೀತಿಯಲ್ಲಿಯೇ ಎಲ್ಲಾ ಬುಧವಾರ ಗಳಂದು ಪ್ರತ್ಯೇಕ ಸಭೆ ನಡೆಯಲಿದೆ.

ಕೆ-ರೈಲು ಯೋಜನೆಗಳಿಗೆ ಬೇಕಾದ ಸ್ಥಳದ ಬಗ್ಗೆ ನಿರ್ಣಯ ನಡೆಯುತ್ತಿದೆ. ಸ್ಥಳ ವಶಪಡಿಸುವ ಪ್ರಕ್ರಿಯೆ ನಡೆದಿಲ್ಲ. ಮುಂ ದಿನ ೪ ವರ್ಷಗಳಲ್ಲಿ ಬಹುತೇಕ ವಿಲ್ಲೇಜ್ ಕಚೇರಿಗಳನ್ನು ಡಿಜಿಟಲೀಕರಣ ಮಾಡ ಲಾಗುವುದು.

ಈ ಮೂಲಕ ಸಾರ್ವಜನಿಕರಿಗೆ ವಿವಿಧ ಸೌಲಭ್ಯಗಳು ಅತೀ ವೇಗ ಸಿಗಲಿದೆ. ಅಲ್ಲದೆ ರಾಜ್ಯದ ಎಲ್ಲಾ ವಿಲ್ಲೇಜ್  ಕಚೇರಿಗಳನ್ನು ಒಂದೇ ಸಂಪರ್ಕಕ್ಕೆ ತರಲಾಗುವುದು ಎಂದವರು ಹೇಳಿದರು. ಸಚಿವರ ಜತೆಗೆ ಹಿರಿಯ ಕಂದಾಯ ಅಧಿಕಾರಿಗಳೂ ಇದ್ದರು.

NO COMMENTS

LEAVE A REPLY