ಬಿಹಾರದಲ್ಲಿ ಮಾವೋವಾದಿ ಆಕ್ರಮಣ ೧೦ ಸಿಆರ್ಪಿಎಫ್ ಯೋಧರು ಮೃತ್ಯು

0
236

ಪಾಟ್ನಾ: ಬಿಹಾರದಲ್ಲಿ  ಮಾವೋ ವಾದಿಗಳು ನಿನ್ನೆ ರಾತ್ರಿ ನಡೆಸಿದ ಆಕ್ರಮಣದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್ ಪಿಎಫ್)ನ ಹತ್ತು ಮಂದಿ ‘ಕೋಬ್ರಾ’ ಕಮಾಂಡೊಗಳು ಮೃತ್ಯುಗೀಡಾಗಿದ್ದಾರೆ. ಗಯದ ಚರ್‌ಬಂಧ ಅರಣ್ಯವಲಯದಲ್ಲಿ ಮಾವೋವಾದಿಗಳು ಮೊದಲು ಬಾಂಬು ಸ್ಫೋಟಿಸಿದ್ದು ಬಳಿಕ  ಸಿಆರ್‌ಪಿಎಫ್ ತಂಡದ ಮೇಲೆ ಗುಂಡು ಹಾರಾಟ ನಡೆಸಿ ದ್ದಾರೆ. ಸಿಆರ್‌ಪಿಎಫ್ ಮುರಳಿ ಗುಂಡಿ ಕ್ಕಿದ ಪರಿಣಾಮ ಮೂವರು ಮಾವೋ ವಾದಿಗಳು ಹತರಾಗಿದ್ದಾರೆ. ಮಾವೋ ವಾದಿ ಆಕ್ರಮಣದಲ್ಲಿ ಆರು ಮಂದಿ ಸಿಆರ್‌ಪಿಎಫ್ ಯೋಧರು ಗಂಭೀರ ಗಾಯಗೊಂಡಿದ್ದಾರೆ.

ಇಂಪ್ರೋವೈಸ್ಡ್ ಎಕ್ಸ್‌ಪ್ಲೋಸಿವ್ ಡಿವೈಸ್ ಬಳಸಿ ಮಾವೋವಾದಿಗಳು ಸ್ಫೋಟ ನಡೆಸಿರುವುದಾಗಿ ತಿಳಿದು ಬಂ ದಿದೆ. ಗಯದಲ್ಲಿರುವ ಮಾವೋವಾದಿ ವಲಯಗಳಲ್ಲಿ ತಪಾಸಣೆ ನಡೆಸಿ ಸಿಆರ್‌ಪಿಎಫ್ ಯೋಧರು ಮರಳಿ ಬರುತ್ತಿದ್ದಾಗ  ಸ್ಫೋಟ ನಡೆಸಲಾಗಿದೆ. ಘಟನೆ ಸ್ಥಳದಿಂದ ಮಾರಕಾಯುಧ ಹಾಗೂ ಸ್ಫೋಟದ ವಸ್ತುಗಳನ್ನು ಪತ್ತೆಹ ಚ್ಚಲಾಗಿದೆ.  ಮಾವೋವಾ ದಿಗಳ ನಿಗ್ರಹಕ್ಕಾಗಿ ರೂಪೀಕರಿಸಿದ ಕೋಬ್ರಾ ಬೆಟಾಲಿಯನ್‌ಗೆ ಒಳಪಟ್ಟ ಯೋಧರು ಮೃತ್ಯುಗೀಡಾದವರಾಗಿದ್ದಾರೆ.

NO COMMENTS

LEAVE A REPLY