ಅಬಕಾರಿ ಅಧಿಕಾರಿಗೆ ಹಲ್ಲೆ; ಆರೋಪಿ ಬಂಧನ

0
172

ಕಾಸರಗೋಡು: ಸಮನ್ಸ್ ನೀಡಲು ಹೋದ ಅಬಕಾರಿ ಅಧಿಕಾರಿಗೆ ಹಲ್ಲೆಗೈದ ಪ್ರಕರಣ ದಲ್ಲಿ ಆರೋಪಿಯನ್ನು ವಿದ್ಯಾ ನಗರ ಪೊಲೀಸರು ಬಂಧಿಸಿದ್ದಾರೆ.

 ನೀರ್ಚಾಲು ಎರ್ಪಕಟ್ಟೆ ನಿವಾಸಿ ಅಬ್ದುಲ್ ಸಹದ್ (೪೩) ಎಂಬಾತ ಬಂಧಿತ ಆರೋಪಿ ಯೆಂದು ಪೊಲೀಸರು ತಿಳಿಸಿ ದ್ದಾರೆ.  ಅಬಕಾರಿ ಪ್ರಿವೆಂಟಿವ್ ಆಫೀಸರ್ ದಿವಾಕರನ್ ಎಂಬ ವರು ನೀಡಿದ ದೂರಿನಂತೆ ವಿದ್ಯಾ ನಗರ ಪೊಲೀಸರು ಕೇಸು ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಗಾಂಜಾ ಪ್ರಕರಣಕ್ಕೆ ಸಂಬಂಧಿಸಿ ಅಬಕಾರಿ ಪ್ರಿವೆಂ ಟಿವ್ ಆಫೀಸರ್ ದಿವಾಕರನ್ ನಿನ್ನೆ ಸಮನ್ಸ್ ನೀಡಲೆಂದು ಆರೋಪಿ ಅಬ್ದುಲ್ ಸಹದ್‌ನ ಮನೆಗೆ ತೆರಳಿದ್ದರು. ಈ ವೇಳೆ ಆತ ದಿವಾಕರನ್‌ರಿಗೆ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿಪಡಿಸಿದನೆಂದು ದೂರಲಾಗಿದೆ.

NO COMMENTS

LEAVE A REPLY