ಕಾಸರಗೋಡು: ಜಿಲ್ಲೆಯ ಹೆಸರನ್ನು ಏಮ್ಸ್ ಯಾದಿಯಲ್ಲಿ ಸೇರಿಸಿ ರಾಜ್ಯ ಸರಕಾರ ಕೇಂದ್ರಕ್ಕೆ ಪ್ರಸ್ತಾಪನೆ ಸಲ್ಲಿಸಬೇಕೆಂದು ಆಗ್ರಹಿಸಿ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪ ನಡೆಯುತ್ತಿರುವ ಅನಿರ್ಧಿಷ್ಟಾ ವಧಿ ಮುಷ್ಕರ ೫೪ನೇ ದಿನಕ್ಕೆ ಕಾಲಿಟ್ಟಿದೆ. ಸಾಮಾಜಿಕ ಕಾರ್ಯಕ ರ್ತ ಸಂಜಯ್ ಮಂಗಳೂರು ಸಿ. ಕೃಷ್ಣ ಕುಮಾರ್‌ರಿಗೆ ನೀರು ನೀಡಿ ಗಣೇಶನ್ ಅರಮಂಗಾನಂ ಉದ್ಘಾಟಿಸಿದರು. ಸಿ. ವಿಜಯನ್, ನಿಖಿಲ್ ಮಾವುಂಗಾಲ್, ಕೃಷ್ಣ ಕುಮಾರ್ ಮುಳ್ಳೇರಿಯ ನೇತೃತ್ವ ನೀಡಿದರು. ಹಲವರು ಮಾತನಾಡಿದರು. ಅಂಬಲತ್ತರ ಕುಂಞಿಕೃಷ್ಣನ್ ಅಧ್ಯಕ್ಷತೆ ವಹಿಸಿದರು.