ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ: ಎಪ್ರಿಲ್

0
170

೭ರ ಮುಂಚಿತ ನಿರ್ಮಾಣ ಆರಂಭ- ಸಚಿವಕಾಸರಗೋಡು: ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ ಯೋಜನೆಯ ನಿರ್ಮಾಣ ಚಟುವಟಿಕೆ ಎಪ್ರಿಲ್ ೭ರ ಮುಂಚಿತ ಆರಂಭಿಸಲಾಗುವುದೆಂದು ಸ್ಥಳೀಯಾಡಳಿತ ಅಬಕಾರಿ ಇಲಾಖೆ ಸಚಿವ ಎಂ.ವಿ. ಗೋವಿಂದನ್ ಮಾಸ್ತರ್ ರ ಅಧ್ಯಕ್ಷತೆಯಲ್ಲಿ ಜರಗಿದ ಎಂಡೋ ಸಲ್ಫಾನ್ ಸೆಲ್ ಸಭೆಯಲ್ಲಿ ತೀರ್ಮಾನಿಸ ಲಾಗಿದೆ. ಯು.ಎಲ್.ಸಿ.ಸಿ.ಯೊಂದಿಗೆ ಜಿಲ್ಲಾ ಸಮಾಜಿಕ ನೀತಿ ಅಧಿಕಾರಿ ಕರಾರು ಸಹಿ ಹಾಕಿ ನಿರ್ಮಾಣ ಚಟುವಟಿಕೆಗಳನ್ನು ಆರಂಭಿಸಲಾಗು ವುದು. ಅರ್ಹರಾದ ಎಲ್ಲಾ ಸಂತ್ರಸ್ತರಿಗೂ ನೀತಿ ಖಚಿತಪಡಿಸಲಾಗುವುದೆಂದು ಅವರು ನುಡಿದರು.

ಎಂಡೋಸಲ್ಫಾನ್ ಸೆಲ್‌ನ ಚೆಯರ್‌ಮೆನ್ ಆಗಿ ಹೊಣೆ ವಹಿಸಿ ಕೊಂಡ ಬಳಿಕ  ಪುನರ್ವಸತಿ ಸೆಲ್‌ನ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಂಡೋಸಲ್ಫಾನ್ ಯಾದಿಯಲ್ಲಿ ಒಳಗೊಂಡ ಉಚಿತವಾಗಿ ಮನೆ ನೀಡುವುದಕ್ಕೆ ಅರ್ಜಿದಾರರಿಂದ ಡ್ರಾ ಮೂಲಕ ಆಯ್ದ ೨೬ ಮಂದಿಗೆ ಮನೆ ನೀಡಲು ತೀರ್ಮಾನಿಸಲಾ ಯಿತು. ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜು ಸುಪರಿಂಟೆಂ ಡೆಂಟ್, ಜಿಲ್ಲಾ ಪರಿಶಿಷ್ಟ ಜಾತಿ ಅಧಿಕಾರಿ, ಜಿಲ್ಲಾ ಪರಿಶಿಷ್ಟ ಪಂಗಡ ಅಧಿಕಾರಿಯನ್ನು ಸೆಲ್‌ನಲ್ಲಿ ಸೇರಿ ಸಿಕೊಳ್ಳಲು ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಞಂಬು, ಇ. ಚಂದ್ರಶೇಖರನ್, ಎಂ. ರಾಜಗೋಪಾಲನ್, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಾರಡ್ಕ ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು, ಸೆಲ್ ಸದಸ್ಯರಾದ ಪಂ. ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು ಭಾಗವಹಿಸಿದರು.  ಎಸ್. ಸಾಜಿದ್ ವರದಿ ಮಂಡಿಸಿದರು.

NO COMMENTS

LEAVE A REPLY