ಜ್ಯುವೆಲ್ಲರಿಯಿಂದ ಚಿನ್ನಾಭರಣ ಕಳವುಗೈದು ಮಾರಾಟಹಣ ಮಾದಕವಸ್ತು ತಂಡಕ್ಕೆ ಹಸ್ತಾಂತರ; ಇಬ್ಬರು ಕಸ್ಟಡಿಗೆ

0
352

ಕಾಸರಗೋಡು: ಜ್ಯುವೆಲ್ಲರಿಯಿಂದ ಕಳವುಗೈದ ಚಿನ್ನಾಭರಣಗಳನ್ನು ಮಾರಾಟಗೈದು ಲಭಿಸಿದ ಹಣವನ್ನು ಮಾದಕವಸ್ತು ತಂಡಕ್ಕೆ ಹಸ್ತಾಂತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಕಾಸರಗೋಡು ಅಣಂಗೂರು ನಿವಾಸಿ ಸುಲೈಮಾನ್ ಉನೈಸ್, ಕುಂಡಂಕುಳಿ ದೊಡ್ಡಬಯಲು ಚಾಣತ್ತಲ ಹೌಸ್‌ನ ವೈಶಾಖ್ ಎಂಬಿವರು ಕಸ್ಟಡಿಯಲ್ಲಿರುವ ವ್ಯಕ್ತಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಸುಲೈಮಾನ್ ಉನೈಸ್ ಕಾಸರಗೋಡು ನಗರದ ಪ್ರಮುಖ ಜ್ಯುವೆಲ್ಲರಿಯೊಂದರ ಮಾಜಿ ನೌಕರನಾಗಿದ್ದು, ವೈಶಾಖ್ ಈಗಿನ ನೌಕರನಾಗಿದ್ದಾನೆ.

ಈ ಇಬ್ಬರು ಜ್ಯುವೆಲ್ಲರಿಯ ಸೇಲ್ಸ್ ವಿಭಾಗದಲ್ಲಿ ನೌಕರರಾಗಿದ್ದರು. ಇವರು ೬,೭೨,೫೨೦ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಜ್ಯುವೆಲ್ಲರಿಯಿಂದ ಕಳವುನಡೆಸಿದ್ದು, ಅದನ್ನು ಸ್ನೇಹಿತನ ಮೂಲಕ ಮಾರಾಟಗೈದು ಹಣ ಸಂಪಾದಿಸಿದ್ದಾರೆ. ಆ ಹಣವನ್ನು ಮಾದಕವಸ್ತು ತಂಡಕ್ಕೆ ಹಸ್ತಾಂತರಿಸಿರುವುದಾಗಿ ಪೊಲೀಸರು ನಡೆಸಿದ ತನಿಖೆಯಲ್ಲಿ ತಿಳಿದು ಬಂದಿದೆ.

ಇತ್ತೀಚೆಗೆ ಜ್ಯುವೆಲ್ಲರಿಯಲ್ಲಿ ನಡೆದ ಲೆಕ್ಕಾಚಾರಗಳು ಪರಿಶೀಲಿಸಿದಾಗ ಚಿನ್ನಾಭರಣ ಪ್ರಮಾಣ ಕಡಿಮೆಯಾಗಿರುವುದು ತಿಳಿದು ಬಂದಿದೆ. ಅನಂತರ ಜ್ಯುವೆಲ್ಲರಿ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ನೌಕರನಾಗಿದ್ದ ಓರ್ವ ಚಿನ್ನಾಭರಣ ಕಳವು ನಡೆಯುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಜ್ಯುವೆಲ್ಲರಿ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿಗಳನ್ನು ಕಸ್ಟಡಿಗೆ ತೆಗೆಯಲಾಗಿದೆ. ಬಳಿಕ ಅವರನ್ನು ತನಿಖೆಗೊಳಪಡಿಸಿದಾಗ ಚಿನ್ನಾಭರಣಗಳನ್ನು ಕಳವುಗೈದು ಅದನ್ನು ಮಾರಾಟಗೈದಿರುವುದಾಗಿಯೂ, ಅದರಿಂದ ಲಭಿಸಿದ ಹಣವನ್ನು ಮಾದಕವಸ್ತು ತಂಡಕ್ಕೆ ನೀಡಿರುವುದು ತಿಳಿದು ಬಂದಿದೆ.

NO COMMENTS

LEAVE A REPLY